ಸಿರಿಯ: ಅಮೆರಿಕ ಸೇನೆಯ ಡ್ರೋನ್ ದಾಳಿಯಲ್ಲಿ ಅಲ್ ಖಾಯಿದಾ ಬೆಂಬಲಿತ ಗುಂಪಿನ ಮುಖಂಡನ ಹತ್ಯೆ

Update: 2022-06-28 17:35 GMT

ಸಿರಿಯದ ಇದ್ಲಿಬ್ ಪ್ರಾಂತದಲ್ಲಿ ಸೋಮವಾರ ಮಧ್ಯರಾತ್ರಿಗೆ ಕೆಲವೇ ಸಮಯದ ಮೊದಲು ಈ ದಾಳಿ ನಡೆದಿದೆ. ಶಂಕಿತ ಉಗ್ರಗಾಮಿಯನ್ನು ಹೊರಾಸ್ ಅಲ್ ದೀನ್ ಗುಂಪಿನ ಹಿರಿಯ ನಾಯಕನಾದ ಅಬು ಹಂಝಾ ಅಲ್ ಯೆಮೆನಿ ಎಂದು ಗುರುತಿಸಲಾಗಿದೆ. ದಾಳಿ ನಡೆದ ಸಂದರ್ಭದಲ್ಲಿ ಅಲ್ ಯೆಮೆನಿ ಏಕಾಂಗಿಯಾಗಿ ಮೋಟಾರ್ ಸೈಕಲೊಂದರಲ್ಲಿ ಪ್ರಯಾಣಿಸುತ್ತಿದ್ದನೆನ್ನಲಾಗಿದೆ. ದಾಳಿಯಲ್ಲಿ ಯಾವುದೇ ನಾಗರಿಕರ ಸಾವುನೋವು ಸಂಭವಿಸಿಲ್ಲವೆಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ತಿಳಿಸಿದೆ.

 ಹೊರಾಸ್ ಅಲ್ ದೀನ್ ಸಂಘಟನೆಯು ಅಲ್ಖಾಯಿದಾ ಜೊತೆ ನಂಟು ಹೊಂದಿರುವ ತೀವ್ರವಾದಿ ಸಂಘಟನೆಯೆನ್ನಲಾಗಿದೆ. ಈ ಗುಂಪು ಬಂಡುಕೋರರ ಭದ್ರಕೋಟೆಯಾದ ಇದ್ಲಿಬ್ನ ಅತ್ಯಂತ ಬಲಿಷ್ಠ ಬಂಡುಕೋರ ಗುಂಪಾದ ಹಯಾತ್ ತಾಹ್ರಿರ್ ಅಲ್-ಶಾಮ್ನಿಂದ ಸಿಡಿದುಹೋದ ಸಂಘಟನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News