×
Ad

ಮಲಬಾರ್ ಗೋಲ್ಡ್‌ನಿಂದ ವಿದ್ಯಾರ್ಥಿ ವೇತನ ವಿತರಣೆ

Update: 2022-06-29 18:57 IST

ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಸಿಆರ್‌ಎಸ್ ಯೋಜನೆಯಡಿಯಲ್ಲಿ ಜಿಲ್ಲೆಯ ೫೩ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಶನಿವಾರ ಉಡುಪಿ ಶಾಖೆಯಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಕೆಎಂಎಫ್ ನಿರ್ದೇಶಕ ದಿವಾಕರ್ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಮೊಕ್ತೆಸರರು ಚಂದ್ರ ಶೇಖರ್ ಶೆಟ್ಟಿ, ಡಾ.ವಿದ್ಯಾ ಸರಸ್ವತಿ ಮಾತನಾಡಿದರು.

ದ.ಕ. ಮತ್ತು ಉಡುಪಿ ಜಿಲ್ಲಾ ಜಮಿಯಿತುಲ್ ಫಲಾಹ್ ಅಧ್ಯಕ್ಷ ಶಬಿ ಅಹ್ಮದ್ ಕಾಜಿ, ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಪುರಂದರ ತಿಂಗಳಾಯ, ತಂಝೀಮ್ ಶಿರ್ವ, ಸಂದ್ಯಾ ಶೆಣೈ ಉಪಸ್ಥಿತರಿದ್ದರು. ಉಡುಪಿ ಜಿಲ್ಲೆಯಲ್ಲಿ ಅಧಿಕ ಅಂಕ ಪಡೆದ ಹರ್ಷಿತ, ಗುರುರಾಜ್, ಪುನೀತ್ ನಾಯ್ಕ್ ಮಲ್ಪೆ, ಅದ್ವೈತ್ ಶಂಕರನಾರಾ ಯಣ ಅವರನ್ನು ಸನ್ಮಾನಿಸಲಾಯಿತು.  ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ರಾಘವೇಂದ್ರ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News