ಯುರೋಪ್‌ನಲ್ಲಿ ಅಮೆರಿಕ ಸೇನೆಯ ಬಲವರ್ಧನೆ : ಬೈಡನ್ ಘೋಷಣೆ

Update: 2022-06-29 16:29 GMT

 ಮ್ಯಾಡ್ರಿಡ್, ಜೂ.29: ಯುರೋಪ್‌ನಲ್ಲಿನ ನೇಟೊ ಪಡೆಗಳಲ್ಲಿ ಅಮೆರಿಕದ ವಾಯುಸೇನೆ, ಭೂಸೇನೆ ಹಾಗೂ ನೌಕಾಸೇನೆಯ ಬಲವರ್ಧನೆ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಘೋಷಿಸಿದ್ದಾರೆ. ಹಿಂದೆಂದಿಗಿಂತಲೂ ಒಕ್ಕೂಟ(ನೇಟೊ)ದ ಅಗತ್ಯ ಈಗ ಹೆಚ್ಚಿದೆ. ಭೂಮಿ, ಆಗಸ, ಸಮುದ್ರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನೇಟೊವನ್ನು ಸಶಕ್ತಗೊಳಿಸಲಾಗುವುದು ಎಂದು ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ಅಟ್ಲಾಂಟಿಕ್ ಒಕ್ಕೂಟದ ಶೃಂಗಸಭೆಯಲ್ಲಿ ಅವರು ಹೇಳಿದ್ದಾರೆ.

 ನೇಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್‌ಬರ್ಗ್ ಜತೆ ಪ್ರತ್ಯೇಕ ಸಭೆ ನಡೆಸಿದ ಬಳಿಕ ಮಾತನಾಡಿದ ಬೈಡನ್, ನೇಟೊ ಪಡೆಗೆ ಹೆಚ್ಚುವರಿ ತುಕಡಿಗಳನ್ನು ಸೇರ್ಪಡೆಗೊಳಿಸಲಾಗುವುದು. ಸ್ಪೈನ್‌ನ ರೋಟದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ನೌಕಾಪಡೆಯ ತುಕಡಿಗಳನ್ನು 4ರಿಂದ 6ಕ್ಕೆ ಹೆಚ್ಚಿಸಲಾಗುವುದು, ಪೋಲಂಡನ್‌ನಲ್ಲಿ 5ನೇ ಆರ್ಮಿ ಕಾರ್ಪ್ಸ್‌ನ ಶಾಶ್ವತ ಕೇಂದ್ರಕಚೇರಿ, ರೊಮಾನಿಯಾದಲ್ಲಿ 3,000 ಯೋಧರು ಹಾಗೂ ಇತರ 2000 ಸದಸ್ಯರ ಯುದ್ಥತಂಡ ಒಳಗೊಂಡಿರುವ ಹೆಚ್ಚುವರಿ ಬ್ರಿಗೇಡ್, ಬ್ಯಾಲಿಸ್ಟಿಕ್ ದೇಶಗಳಲ್ಲಿ ಆವರ್ತ(ರೊಟೇಷನಲ್) ಪಡೆಯ ಬಲವರ್ಧನೆ, ಬ್ರಿಟನ್‌ಗೆ ಎಫ್-35 ಯುದ್ಧವಿಮಾನಗಳ ಹೆಚ್ಚುವರಿ ತುಕಡಿ, ಜರ್ಮನಿ ಮತ್ತು ಇಟಲಿಯಲ್ಲಿ ಹೆಚ್ಚುವರಿ ವಾಯುರಕ್ಷಣೆ ಮತ್ತು ಇತರ ಸಾಮರ್ಥ್ಯ ನಿಯೋಜನೆಗೆ ನಿರ್ಧರಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News