ವಿಂಬಲ್ಡನ್‌ ಟೆನಿಸ್‌ : 3ನೆ ಶ್ರೇಯಾಂಕದ ಕ್ಯಾಸ್ಪರ್ ರೂಡ್‍ಗೆ ಆಘಾತ

Update: 2022-06-30 02:45 GMT
ಉಗೊ ಹಂಬರ್ಟ್ (Image: twitter.com)

ಲಂಡನ್ : ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ವಿಶ್ವ ರ‍್ಯಾಂಕಿಂಗ್ ನಲ್ಲಿ 125ನೇ ಸ್ಥಾನದಲ್ಲಿರುವ ಉಗೊ ಹಂಬರ್ಟ್ ಅವರು ಮೂರನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ ಅವರನ್ನು 3-6, 6-2, 7-5, 6-4 ಅಂತರದಿಂದ ಕೆಡವಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.

ಮೊದಲ ಸುತ್ತಿನ ಪಂದ್ಯದಲ್ಲಿ 3 ಗಂಟೆ 28 ನಿಮಿಷಗಳಲ್ಲಿ ಐದು ಸೆಟ್ ಸೆಣಸಿ ಅರ್ಜೆಂಟೀನಾದ ಥಾಮಸ್ ಮಾರ್ಟಿನ್ ಎಚೆವೆರಿ ವಿರುದ್ಧ ಗೆಲುವು ಸಾಧಿಸಿದ್ದ ಫ್ರಾನ್ಸ್ ಆಟಗಾರ ಬುಧವಾರ ರೂಡ್ ವಿರುದ್ಧ ಜಯ ಸಾಧಿಸಿ ಮೂರನೇ ಸುತ್ತಿಗೆ ಮುನ್ನಡೆದರು.

ರೂಡ್ ವಿರುದ್ಧ 2 ಗಂಟೆ 36 ನಿಮಿಷಗಳ ಹೋರಾಟದಲ್ಲಿ ಆರು ಬಾರಿ ರೂಡ್ ಅವರ ಸರ್ವೀಸ್ ಬ್ರೇಕ್ ಮಾಡಿ 53 ವಿನ್ನರ್‍ಗಳನ್ನು ಹೊಡೆದು ಗಮನ ಸೆಳೆದರು.

ನಿಧಾನ ಆಟ ಆರಂಭಿಸಿದ ಹಂಬರ್ಟ್ 15 ಲೋಪಗಳನ್ನು ಎಸಗಿದರೆ, ಎದುರಾಳಿ ಅದ್ಭುತ ಪ್ರದರ್ಶನ ನೀಡಿದರು. ಆದರೆ ಫ್ರಾನ್ಸ್ ಪ್ರತಿಭೆ ಆಟದ ಲಯವನ್ನು ಕಂಡುಕೊಂಡ ಬಳಿಕ ದೊಡ್ಡ ಸರ್ವ್ ಮತ್ತು ಆಕ್ರಮಣಕಾರಿ ಆಟದ ಮೂಲಕ ರೂಡ್ ಅವರನ್ನು ಟೂರ್ನಿಯಿಂದ ಹೊರಗಟ್ಟಿದರು.

ಹುಲ್ಲುಹಾಸಿನ ಅಂಗಣದಲ್ಲಿ ಈ ಮುನ್ನ ಕೂಡಾ ಉತ್ತಮ ಪ್ರದರ್ಶನ ನೀಡಿದ್ದ ಹಂಬರ್ಟ್, ಆಲ್ ಇಂಗ್ಲೆಂಡ್ ಕ್ಲಬ್‍ನಲ್ಲಿ 2019ರಲ್ಲಿ ನಾಲ್ಕನೇ ಸುತ್ತು ತಲುಪಿದ್ದರು. ಕಳೆದ ವರ್ಷ ಹಲ್ಲೆಯಲ್ಲಿ ಮೊಟ್ಟಮೊದಲ ಎಟಿಪಿ ಟ್ರೋಫಿ ಗೆದ್ದಿದ್ದರು.

ಒಂದು ವರ್ಷದ ಹಿಂದೆ ವೃತ್ತಿಜೀವನದಲ್ಲೇ ಅತ್ಯುನ್ನತ ಎಂದರೆ 25ನೇ ರ‍್ಯಾಂಕ್ ಗಳಿಸಿದ್ದ 24 ವರ್ಷ ವಯಸ್ಸಿನ ಹಂಬರ್ಟ್ ಇದೀಗ 125ನೇ ರ‍್ಯಾಂಕಿಂಗ್ ನಲ್ಲಿದ್ದಾರೆ. ಮೂರನೇ ಸುತ್ತಿನಲ್ಲಿ ಅವರು ಬೆಲ್ಜಿಯಂನ ಡೇವಿಡ್ ಗೊಫಿನ್ ವಿರುದ್ಧ ಸೆಣೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News