×
Ad

ಅವನತಿಯ ಕಡೆಗೆ ಪ್ರಯಾಣ ಆರಂಭ: ಉದ್ಧವ್ ಠಾಕ್ರೆ ರಾಜೀನಾಮೆಗೆ ರಾಜ್ ಠಾಕ್ರೆ ಪ್ರತಿಕ್ರಿಯೆ

Update: 2022-06-30 15:22 IST
Photo:PTI

ಮುಂಬೈ: ಶಿವಸೇನೆಯ ವಿರುದ್ಧ ಬಹುಶಃ ಏಕನಾಥ್ ಶಿಂಧೆಯವರಿಗಿಂತ ಹೆಚ್ಚಿನ ರೀತಿಯಲ್ಲಿ  ಬಂಡಾಯದ ಬಾವುಟ ಹಾರಿಸಿರುವ  ರಾಜ್  ಠಾಕ್ರೆ ಕಳೆದ ರಾತ್ರಿ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸೋದರಸಂಬಂಧಿ ಉದ್ಧವ್ ಠಾಕ್ರೆ ಅವರನ್ನು ಕೆಣಕುವ ರೀತಿಯಲ್ಲಿ ಇಂದು ಟ್ವೀಟ್ ಮಾಡಿದ್ದಾರೆ.

"ಯಾರಾದರೂ ಒಬ್ಬರ ಅದೃಷ್ಟವನ್ನು ಒಬ್ಬರ ವೈಯಕ್ತಿಕ ಸಾಧನೆ ಎಂದು ತಪ್ಪಾಗಿ ಅರ್ಥೈಸಿಕೊಂಡಾಗ, ಒಬ್ಬರ ಅವನತಿಯ ಕಡೆಗೆ ಪ್ರಯಾಣವು ಆರಂಭವಾಗುತ್ತದೆ" ಎಂದು ಠಾಕ್ರೆ ಟ್ವೀಟ್ ಮಾಡಿದ್ದಾರೆ.

ರಾಜ್ ಠಾಕ್ರೆ ಅವರು ಶಿವಸೇನೆಯೊಳಗೆ ಬಂಡಾಯ ಎದ್ದು ಸುಮಾರು ಎರಡು ದಶಕಗಳ ಹಿಂದೆ ತಮ್ಮದೇ ಆದ ಪಕ್ಷವಾದ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು (ಎಂಎನ್‌ಎಸ್) ಸ್ಥಾಪಿಸಿದ್ದರು. ಆದಾಗ್ಯೂ, ರಾಜ್ ಠಾಕ್ರೆ ಇದುವರೆಗೆ ಸೀಮಿತ ರಾಜಕೀಯ ಯಶಸ್ಸನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News