ಪುತ್ತೂರಿನಲ್ಲಿ ಭಾರೀ ಮಳೆ: ಚೆಲ್ಯಡ್ಕ ಸೇತುವೆ ಮುಳುಗಡೆ, ಹಾರಾಡಿ ಶಾಲೆಯ ಆವರಣ ಗೋಡೆ ಕುಸಿತ

Update: 2022-06-30 10:01 GMT

ಪುತ್ತೂರು, ಜೂ.30: ಗುರುವಾರ ಸುರಿದ ಭಾರೀ ಮಳೆಗೆ ಕೇರಳ ಸಂಪರ್ಕದ ಪರ್ಲಡ್ಕ ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇನ್ನೊಂದೆಡೆ ನಗರದ ಹಾರಾಡಿ‌ ಪ್ರಾಥಮಿಕ ಶಾಲೆಯ ಆವರಣ ಗೋಡೆ ಕುಸಿದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಮುಳುಗಡೆ ಸೇತುವೆ ಎಂದು ಹೆಸರಾಗಿರುವ ಚೆಲ್ಯಡ್ಕ ಸೇತುವೆ ಮುಳುಗಡೆಯಾದ ಹಿನ್ನಲೆಯಲ್ಲಿ ಈ ಭಾಗದ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ಸು ಹಾಗೂ ಇತರ ವಾಹನಗಳು ಸುತ್ತುವರಿದು ಸಂಟ್ಯಾರ್, ರೆಂಜ ಮಾರ್ಗದಲ್ಲಿ  ಚಲಿಸಿದವು.

ಶಾಲಾ ಕೌಂಪೌಂಡ್ ಕುಸಿತ:

ಮಳೆಯಿಂದಾಗಿ ನಗರಸಭಾ ವ್ಯಾಪ್ತಿಯ ಹಾರಾಡಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಕೌಂಪೌಂಡ್ ಕುಸಿದು ಬಿದ್ದು ಸುಮಾರು ರೂ. 15 ಲಕ್ಷ ನಷ್ಟ ಅಂದಾಜಿಸಲಾಗಿದೆ.

ಫಟನಾ ಸ್ಥಳಕ್ಕೆ ನಗರಸಭಾ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸದಸ್ಯೆ ಪ್ರೇಮಲತಾ ‌ನಂದಿಲ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ , ಇಸಿಒ ಹರಿಪ್ರಸಾದ್, ಎಸ್ಡಿಎಂಸಿ‌ ಅಧ್ಯಕ್ಷ ಕೃಷ್ಣ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News