ಬಿಜೆಪಿ ರೀತಿ ಶಿಂಧೆ ಸರಕಾರಕ್ಕೆ ನಾವು ತೊಂದರೆ ಕೊಡುವುದಿಲ್ಲ: ಸಂಜಯ್ ರಾವುತ್

Update: 2022-07-01 07:52 GMT
Photo:PTI

ಮುಂಬೈ: 2019 ರಲ್ಲಿ ಅಧಿಕಾರಕ್ಕೆ ಬಂದ ದಿನವೇ ಉದ್ಧವ್ ಠಾಕ್ರೆ ಸರಕಾರವನ್ನು "ಅಸ್ತವ್ಯಸ್ತಗೊಳಿಸಲು" ಬಿಜೆಪಿ ಶಪಥ ಮಾಡಿತ್ತು ಎಂದು ಆರೋಪಿಸಿರುವ ಶಿವಸೇನೆಯ  ನಾಯಕ ಸಂಜಯ್ ರಾವುತ್, ತಮ್ಮ ಪಕ್ಷವು ಆ ರೀತಿ ಮಾಡುವುದಿಲ್ಲ. ಹೊಸ ಸರಕಾರವು "ಸಾರ್ವಜನಿಕರಿಗಾಗಿ  ಕೆಲಸ ಮಾಡಬೇಕು" ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆ ವಿರುದ್ಧದ ಬಂಡಾಯದ  ನೇತೃತ್ವವಹಿಸಿದ್ದ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಶಿವಸೇನೆ ನಾಯಕನಿಂದ  ಈ ಹೇಳಿಕೆ ಬಂದಿದ್ದು, ದೇವೇಂದ್ರ ಫಡ್ನವಿಸ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ರಾವುತ್, "ನಾನು ಈ ಸರಕಾರವನ್ನು ಅಭಿನಂದಿಸುತ್ತೇನೆ. ನಾನು ಅವರನ್ನು ಸ್ವಾಗತಿಸುತ್ತೇನೆ. ಉದ್ಧವ್ ಠಾಕ್ರೆ ಸರಕಾರ ಅಧಿಕಾರಕ್ಕೆ ಬಂದಾಗ  ಅವರಿಗೆ ತೊಂದರೆ ಕೊಡುತ್ತೇವೆ ಎಂದು ಬಿಜೆಪಿ ಮೊದಲ ದಿನವೇ ಹೇಳಿತ್ತು. ಆದರೆ ನಾವು ಹಾಗೆ ಮಾಡುವುದಿಲ್ಲ, ನಾವು ಈ ಸರಕಾರಕ್ಕೆ ತೊಂದರೆ ನೀಡುವುದಿಲ್ಲ. ಸರಕಾರವು   ಸಾರ್ವಜನಿಕರಿಗಾಗಿ ಕೆಲಸ ಮಾಡಬೇಕು'' ಎಂದರು.

39 ಶಿವಸೇನೆ ಶಾಸಕರು ಠಾಕ್ರೆ ವಿರುದ್ಧ ಬಂಡಾಯವೆದ್ದು ಏಕನಾಥ್ ಶಿಂಧೆ ಬಣಕ್ಕೆ ಸೇರಿದರೂ  ಶಿವಸೇನೆಯ ಸಂಘಟನೆ ದುರ್ಬಲವಾಗಿದೆ ಎನ್ನವುದನ್ನು ರಾವುತ್ ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News