ಪಾಕ್: ತೀವ್ರಗೊಂಡ ವಿದ್ಯುತ್ ಕೊರತೆ: ಇಂಟರ್‌ನೆಟ್ ಸೇವೆ ಸ್ಥಗಿತದ ಸಾಧ್ಯತೆ

Update: 2022-07-01 15:57 GMT

ಇಸ್ಲಮಾಬಾದ್, ಜು.1: ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಇಂಧನದ ಕೊರತೆ ಎದುರಾಗಿರುವುದರಿಂದ ಪಾಕಿಸ್ತಾನದ ಬಹುತೇಕ ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯಸ್ಥಗಿತಗೊಳಿಸಿದ್ದು ದೇಶಕ್ಕೆ ವಿದ್ಯುತ್ ಬಿಕ್ಕಟ್ಟು ಎದುರಾಗಿದೆ ಎಂದು ವರದಿಯಾಗಿದೆ. 

ಪದೇ ಪದೇ ವಿದ್ಯುತ್ ಕಡಿತ ಹಾಗೂ ದೀರ್ಘಾವಧಿಯ ಲೋಡ್‌ಶೆಡ್ಡಿಂಗ್‌ನಿಂದಾಗಿ ತಮ್ಮ ಕಾರ್ಯನಿರ್ವಹಣೆಗೆ ತೊಡಕಾಗಿರುವುದರಿಂದ ಅನಿವಾರ್ಯವಾಗಿ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ದೇಶದ ಟೆಲಿಕಾಂ ನಿರ್ವಾಹಕ ಸಂಸ್ಥೆಗಳು ಗುರುವಾರ ಎಚ್ಚರಿಕೆ ನೀಡಿವೆ. 
ರಾಷ್ಟ್ರವ್ಯಾಪಿ ದೀರ್ಘಾವಧಿ ವಿದ್ಯುತ್ ಕಡಿತದಿಂದಾಗಿ ತಮ್ಮ ಕಾರ್ಯಾಚರಣೆಗೆ ಸಮಸ್ಯೆಯಾಗಿರುವುದರಿಂದ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಪಾಕಿಸ್ತಾನದ ಟೆಲಿಕಾಂ ಆಪರೇಟರ್‌ಗಳು ಎಚ್ಚರಿಕೆ ನೀಡಿದ್ದಾರೆ ಎಂದು ನ್ಯಾಷನಲ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಬೋರ್ಡ್(ಎನ್‌ಐಬಿಟಿ) ಹೇಳಿದೆ.
ಪಾಕಿಸ್ತಾನಕ್ಕೆ ಅಗತ್ಯವಿರುವ ಪ್ರಮಾಣದಷ್ಟು ದ್ರವೀಕೃತ ನೈಸರ್ಗಿಕ ಅನಿಲ(ಎಲ್‌ಎನ್‌ಜಿ) ಪೂರೈಕೆಯಾಗದ ಕಾರಣ ಮುಂದಿನ ದಿನಗಳಲ್ಲಿ ಭಾರೀ ವಿದ್ಯುತ್ ಕಡಿತ ಮತ್ತು ಲೋಡ್‌ಶೆಡ್ಡಿಂಗ್ ಅನಿವಾರ್ಯ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಸೋಮವಾರ ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News