ಸಮಾಜ ಸೇವಾ ಸಂಸ್ಥೆ ಖಲ್ಸಾ ಏಡ್‌ ಸ್ಥಾಪಕ ರವಿ ಸಿಂಗ್‌ ರ ಖಾತೆಯನ್ನು ತಡೆಹಿಡಿದ ಟ್ವಿಟರ್‌

Update: 2022-07-03 06:56 GMT
Photo: Instagram

ಹೊಸದಿಲ್ಲಿ: ಸಾಮಾಜಿಕ ಹಾಗೂ ಮನವೀಯ ಸೇವಾ ಸಂಸೈಎ ಖಾಲ್ಸಾ ಏಡ್ ಸಂಸ್ಥಾಪಕ ರವಿ ಸಿಂಗ್ ಖಾಲ್ಸಾ ಅವರ ಟ್ವಿಟರ್ ಖಾತೆಯನ್ನು ಭಾರತದಲ್ಲಿ ಶನಿವಾರ ನಿಷೇಧಿಸಲಾಗಿದೆ. ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ಅವರ ಖಾತೆಯನ್ನು "ತಡೆಹಿಡಿಯಲಾಗಿದೆ" ಎಂದು ಟ್ವಿಟರ್‌ ತಿಳಿಸಿದೆ.

ರವಿ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯ ಸ್ಕ್ರೀನ್‌ಶಾಟ್ ಅನ್ನು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು "ಇದು ಬಿಜೆಪಿ ಅಡಿಯಲ್ಲಿ ಪ್ರಜಾಪ್ರಭುತ್ವದ ನಿಜವಾದ ಮುಖವಾಗಿದೆ. ಸಿಖ್ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಯಾನ್ ಮಾಡುವುದರಿಂದ ನಾವು ಧ್ವನಿ ಎತ್ತುವುದನ್ನು ತಡೆಯುವುದಿಲ್ಲ. ನಾವು ಗಟ್ಟಿಯಾಗುತ್ತೇವೆ!" ಎಂದು ಬರೆದುಕೊಂಡಿದ್ದಾರೆ. 

ಪ್ರಪಂಚದಾದ್ಯಂತ ಪರಿಹಾರ ಮತ್ತು ಮಾನವೀಯ ಯೋಜನೆಗಳನ್ನು ನಡೆಸಲು ಹೆಸರುವಾಸಿಯಾದ ಖಾಲ್ಸಾ ಏಡ್, 2020 ರಲ್ಲಿ ರೈತ ಆಂದೋಲನದ ಸಂದರ್ಭದಲ್ಲಿ ಸರಕಾರದ ವಿರೋಧ ಕಟ್ಟಿಕೊಂಡಿತ್ತು. ಅದರ ಕೆಲವು ಅಧಿಕಾರಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ನೋಟಿಸ್ ಕಳುಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News