ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತ USCIRF ಸಮಿತಿಯ ವರದಿ ಪಕ್ಷಪಾತಿಯಾಗಿದೆ: ವಿದೇಶಾಂಗ ಸಚಿವಾಲಯ

Update: 2022-07-03 07:04 GMT

ಹೊಸದಿಲ್ಲಿ: ಭಾರತವು "ಪಕ್ಷಪಾತವಾಗಿರುವ ಹೇಳಿಕೆಗಳನ್ನು ನೀಡಿದೆ" ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ (ಯುಎಸ್‌ಸಿಐಆರ್‌ಎಫ್) ಆಯೋಗದ ವರದಿಯ ಕುರಿತು ಶನಿವಾರ ಆಕ್ರೋಶ ವ್ಯಕ್ತಪಡಿಸಿದೆ. ಅಂತಹ ಹೇಳಿಕೆಗಳು ಭಾರತ ಮತ್ತು ಅದರ ಸಾಂವಿಧಾನಿಕ ಚೌಕಟ್ಟಿನ ʼತೀವ್ರವಾದ ತಿಳುವಳಿಕೆಯ ಕೊರತೆಯನ್ನುʼ ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.

USCIRF ತನ್ನ ವರದಿಯಲ್ಲಿ, "ವಿಮರ್ಶಾತ್ಮಕ ಧ್ವನಿಗಳು, ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಭಾರತದ ಪತ್ರಕರ್ತರು ಹಾಗೂ ಅವರ ಪರವಾಗಿ ವಕಾಲತ್ತು ವಹಿಸುವವರನ್ನು ದಮನ ಮಾಡಲಾಗುತ್ತಿದೆ" ಎಂದು ಆರೋಪಿಸಿದ ಒಂದು ದಿನದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ (MEA) ಪ್ರತಿಕ್ರಿಯೆ ಬಂದಿದೆ.

"ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಯುಎಸ್ ಕಮಿಷನ್ (USCIRF) ಭಾರತದ ಮೇಲೆ ಪಕ್ಷಪಾತ ಮತ್ತು ತಪ್ಪಾದ ಹೇಳಿಕೆಗಳನ್ನು ಹೊರಡಿಸಿದ್ದನ್ನು ನಾವು ನೋಡಿದ್ದೇವೆ" ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಈ ಹೇಳಿಕೆಗಳು ಭಾರತ ಮತ್ತು ಅದರ ಸಾಂವಿಧಾನಿಕ ಚೌಕಟ್ಟು, ಅದರ ಬಹುತ್ವ ಮತ್ತು ಅದರ ಪ್ರಜಾಪ್ರಭುತ್ವದ ನೀತಿಯ ಬಗ್ಗೆ ಅವರಿಗಿರುವ ತೀವ್ರ ತಿಳುವಳಿಕೆಯ ಕೊರತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.

"ದುರದೃಷ್ಟಕರವಾಗಿ, USCIRF ತನ್ನ ಪ್ರೇರಿತ ಕಾರ್ಯಸೂಚಿಯ ಅನುಸಾರವಾಗಿ ತನ್ನ ಹೇಳಿಕೆಗಳು ಮತ್ತು ವರದಿಗಳಲ್ಲಿ ಸತ್ಯಗಳನ್ನು ಪದೇ ಪದೇ ತಪ್ಪಾಗಿ ನಿರೂಪಿಸುವುದನ್ನು ಮುಂದುವರೆಸಿದೆ. ಅಂತಹ ಕ್ರಮಗಳು ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ವಸ್ತುನಿಷ್ಠತೆಯ ಬಗ್ಗೆ ಕಳವಳವನ್ನು ಬಲಪಡಿಸಲು ಮಾತ್ರ ಸಹಾಯ ಮಾಡುತ್ತದೆ,” ಎಂದು ಬಾಗ್ಚಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News