ಕಾರ್ಪೊರೇಟ್ ಪ್ಯಾಶನ್ ವೀಕ್ ಸ್ಪರ್ಧೆ; ಕಾರ್ಕಳದ ಸುಮೇಧಾ ಪ್ಯಾಶನ್ ಇಸ್ಟಿಟ್ಯೂಟ್‌ಗೆ ಪ್ರಶಸ್ತಿ

Update: 2022-07-04 16:32 GMT

ಕಾರ್ಕಳ: ಬೆಂಗಳೂರು ಕಾರ್ಪೊರೇಟ್ ವಿಮೆನ್ ಆ್ಯಂಡ್ ವಿಮೆನ್ ಎಂಟರ್ಪ್ರಿನರ್ ಆಶ್ರಯದಲ್ಲಿ ಬೆಂಗಳೂರಿನ ಹೋಟೆಲ್ ತಿಲಕ್ ಅಶೋಕದ ಸಭಾಂಗಣದಲ್ಲಿ ನಡೆದ "ಬಿಯುವರ್ ಓನ್ ಲೇಬಲ್ ಫಾರ್ ವಿಮನ್" ಕಾರ್ಪೊರೇಟ್ ಪ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸಾಧನ ಜಿ ಆಶ್ರಿತ್ ನೇತೃತ್ವದ ಕಾರ್ಕಳದ ಸುಮೇಧಾ ಪ್ಯಾಶನ್ ಇನ್ ಸ್ಟಿಟ್ಯೂಟ್ ತಂಡವು ಕಾರ್ಪೊರೇಟ್ ಪ್ಯಾಶನ್ ವೀಕ್‌ 2022 ನ ಗ್ರ್ಯಾಂಡ್ ಪಿನಾಲೆಯ ಮಾಡೆಲ್ ಗಳಿಗೆ ತಯಾರಿಸಿದ ನೂತನ ಬಗೆ ಬಗೆಯ ವಸ್ತ್ರವಿನ್ಯಾಸಕ್ಕಾಗಿ ವಸ್ತ್ರ ವಿನ್ಯಾಸ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕಳೆದ ವರ್ಷ ಕಿರುತೆರೆಯ ನಟಿಯರಿಗೆ ವಸ್ತ್ರವಿನ್ಯಾಸಕ್ಕಾಗಿ ಕಾರ್ಕಳದ ಸುಮೇಧಾ ಪ್ಯಾಶನ್ ಇನ್ಸ್ಟಿ ಟ್ಯೂಟ್ ಮಾಲಕಿ ಸಾಧನ ಜಿ ಆಶ್ರಿತ್ ಕಿರುತೆರೆಯ ಪ್ರತಿಷ್ಠಿತ ರಾಜ್ಯ ಮಟ್ಟದ ಗೋಲ್ಡನ್ ವಿಮೆನ್ ಅವಾರ್ಡ್ ಅನ್ನು ಗೆದ್ದುಕೊಂಡಿದ್ದ ಇವರು ಈ ಬಾರಿ ತನ್ನ ನೇತೃತ್ವದಲ್ಲಿ ಸುಮೇಧಾ ಪ್ಯಾಶನ್ ಇನ್ಸ್ಟಿ ಟ್ಯೂಟ್ ಕಾರ್ಪೊರೇಟ್ ಪ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ತಂಡದಲ್ಲಿ  ಸುಮೇಧಾ ಪ್ಯಾಶನ್ ಇಸ್ಟಿಟ್ಯೂಟ್ ವಿದ್ಯಾರ್ಥಿಗಳಾದ ಚಂದನ, ಪ್ರಮೋದ, ಪಂಚಮಿ, ಜಯಂತಿ, ಸುಪ್ರಿಯಾ, ಕಾದಂಬರಿ ಶೆಟ್ಟಿ, ನವ್ಯ, ಸೌಜನ್ಯ, ಪ್ರಣಮ್ಯ, ರಶ್ಮಿ, ಶಿಲ್ಪ, ಸೌಮ್ಯ ವಸ್ತ್ರ ವಿನ್ಯಾಸದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News