​ಇಟಲಿ: ಹಿಮನದಿಯ ಬೃಹತ್ ಭಾಗ ಒಡೆದು 6 ಮಂದಿ ಮೃತ್ಯು‌

Update: 2022-07-04 17:28 GMT

ರೋಮ್, ಜು.4: ಇಟಲಿಯ ಪರ್ವತ ಹಿಮನದಿ ಕರಗಿ ದೊಡ್ಡಭಾಗವಾಗಿ ಒಡೆದ ಬಳಿಕ ಸಂಭವಿಸಿದ ಹಿಮಪಾತಕ್ಕೆ ಸಿಲುಕಿ 6 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದು 9 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 

ಇಟಲಿಯ ಟ್ರೆಂಟಿನೊ ಜಿಲ್ಲೆಯ ಪರ್ವತದಲ್ಲಿರುವ ಮರ್ಮೊಲಾಡ ಹಿಮನದಿ ಕರಗಿ, ಹಿಮಪಾತದ ಜತೆಗೆ ಬೃಹತ್ ಬಂಡೆಕಲ್ಲುಗಳ ಸಹಿತ ಬೆಟ್ಟದಿಂದ ಕೆಳಗುರುಳಿದಾಗ, ಬೆಟ್ಟ ಏರುತ್ತಿದ್ದವರು ಅದರಡಿ ಸಿಲುಕಿದ್ದಾರೆ.

 6 ಮಂದಿ ಮೃತಪಟ್ಟು 9 ಮಂದಿ ಗಾಯಗೊಂಡಿದ್ದಾರೆ ಎಂದು ಟ್ರೆಂಟಿನೊ ಜಿಲ್ಲಾಧಿಕಾರಿ ಸ್ಯಾಂಡ್ರೊ ರೈಮೊಂಡಿ ಹೇಳಿದ್ದಾರೆ. 17 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅದಕ್ಕೂ ಮುನ್ನ ವೆನೆಟೊ ಪ್ರಾದೇಶಿಕ ಗವರ್ನರ್ ಲೂಕ ಝಯಾಯ ಹೇಳಿದ್ದರು. 

ಮೃತಪಟ್ಟವರ ರಾಷ್ಟ್ರೀಯತೆಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಹಿಮಪಾತವು ರಕ್ಷಣಾ ಕಾರ್ಯಾಚರಣೆಗೆ ಮತ್ತು ಮೃತದೇಹಗಳನ್ನು ಕೆಳಗೆ ತರಲು ಅಡ್ಡಿಯಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಡ್ರೋನ್ ಬಳಸಲಾಗುತ್ತಿದೆ. 

ಗಾಯಾಳುಗಳಲ್ಲಿ ಇಬ್ಬರು ಜರ್ಮನ್ ಪ್ರಜೆಗಳು . ಬೆಟ್ಟದ ಬುಡದಲ್ಲಿ 16 ಕಾರುಗಳನ್ನು ಪಾರ್ಕ್ ಮಾಡಲಾಗಿದ್ದು ಅದರ ದಾಖಲೆ ಪತ್ರದ ಆಧಾರದಲ್ಲಿ ಮೃತರ ಮತ್ತು ಗಾಯಾಳುಗಳ ಮಾಹಿತಿ ಪಡೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News