ಡಿಕೆಎಸ್‌ಸಿ ಒಮನ್ ನ್ಯಾಷನಲ್ ಸಮಿತಿ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಮೋನಬ್ಬ ಅಬ್ದುಲ್ ರಹ್ಮಾನ್

Update: 2022-07-04 17:30 GMT

ಒಮನ್: ಡಿಕೆಎಸ್‌ಸಿ ಒಮನ್ ನ್ಯಾಷನಲ್ ಸಮಿತಿಯ ವಾರ್ಷಿಕ ಮಹಾ ಸಭೆ ಮೋನಬ್ಬ ಅಬ್ದುಲ್ ರಹ್ಮಾನ್ ಅಧ್ಯಕ್ಷತೆಯಲ್ಲಿ ರುವಿ ಮಸ್ಕತ್ ಸುನ್ನಿ ಸೆಂಟರ್ ಮದ್ರಸ ಹಾಲ್ ನಲ್ಲಿ ನಡೆಯಿತು.‌

ಕಲಂದರ್ ಬಾವ ದುಆ ನೆರವೇರಿಸಿದರು. ಅಶ್ರಫ್ ಬಾವ ಮಂಗಳೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯೂಸುಫ್ ಹೈದರ್ ಕಳೆದ ಸಾಲಿನ ವರದಿ ವಾಚಿಸಿ, ಆರಿಫ್ ಕೋಡಿ ಲೆಕ್ಕ ಪತ್ರ ಮಂಡಿಸಿದರು.

ಪರ್ವೇಝ್ ರಫೀಕ್,‌ ಮುಹ್ಸಿನ್ ಮೋನಬ್ಬ, ಶಿಹಾಬ್ ಮೊಹಿದಿನ್, ರಮೀಝ್ ಸುಲೈಮಾನ್ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಳಿಕ ಪ್ರವಾಸಿ ಜೀವನಕ್ಕೆ ವಿದಾಯ ಹೇಳಿ ಊರಿಗೆ ತೆರಳುವ ಅಬ್ಬಾಸ್ ಹಾಜಿ ಉಚ್ಚಿಲರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹ್ಮಾನ್ ರವರು ಮಾತನಾಡಿ, ಪ್ರಸ್ತುತ ಕಾಲ ಘಟ್ಟದಲ್ಲಿ ಮುಸ್ಲಿಂ  ಸಮುದಾಯದ ಎದುರಿಸುವ ಸಮಸ್ಯೆಗಳು ಇಲ್ಲದಂತೆ ಮಾಡಬೇಕಾದರೆ ನಮ್ಮ ಮುಂದಿನ ತಲೆಮಾರಿಗೆ ಉತ್ತಮ ವಿದ್ಯಾಭ್ಯಾಸ ವನ್ನು ಕೊಡುವುದರ ಮೂಲಕ ಎಚ್ಚೆತ್ತುಕೊಳ್ಳಬೇಕಾಗಿದೆ. ಅದರಲ್ಲಿ ದಕ್ಷಿಣ ಕನ್ನಡ ಸುನ್ನಿ ಸೆಂಟರ್ ನಲ್ಲಿ ಅತ್ಯುನ್ನತ ಮಟ್ಟದ ವಿದ್ಯಾರ್ಜನೆ ಸಿಗುತಿದ್ದು, ಇದರ ಸದುಪಯೋಗ ಪಡಿಸಿ, ಈ ಸಂಸ್ಥೆಯ ಬೆಳವಣಿಗೆಯಲ್ಲಿ ತಾವೆಲ್ಲರೂ ಕೈ ಜೋಡಿಸಿ ಸಹಕರಿಸಬೇಕೆಂದು ಹೇಳಿದರು.

ನೂತನ ಸಮಿತಿಯ ಜವಾಬ್ದಾರಿ ಅಶ್ರಫ್ ಬಾವ ಮಂಗಳೂರು ಮತ್ತು ಅಲ್ತಾಫ್ ಮಂಗಳೂರು ಅವರಿಗೆ ನೀಡಲಾಯಿತು. 2022-23ನೇ ಸಾಲಿನ ನೂತನ ಸಮಿತಿ ರಚಿಸುವ ಪ್ರಕ್ರಿಯೆ ನಡೆಯಿತು. ಮೋನಬ್ಬ ಅಬ್ದುಲ್ ರಹ್ಮಾನ್ ಮತ್ತೊಮ್ಮೆ ನೂತನ ಅಧ್ಯಕ್ಷರಾಗಿ ನೇಮಕ ಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಮೊಹಿದಿನ್ ಪಡುಬಿದ್ರಿ, ಕೋಶಾಧಿಕಾರಿಯಾಗಿ ಸುಲೈಮಾನ್ ಮಿತ್ತೂರು ಇವರನ್ನು ನೇಮಕ ಮಾಡಲಾಯಿತು. ಅಲ್ಲದೆ ಇತರ ಹುದ್ದೆಗಳನ್ನು ಅರ್ಹ ಸದಸ್ಯರಿಗೆ ನೀಡಲಾಯಿತು. 23 ಕಾರ್ಯ ಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.

ಇಬ್ರಾಹಿಂ ಹಾಜಿ ಅತ್ರಾಡಿ,ಅನ್ಸಾರ್ ಕಾಟಿಪಳ್ಳ,ಆಬಿದ್ ಹೈದ್ರೋಸ್ ತಂಙಳ್ ಎಮ್ಮೆಮ್ಮಾಡ್ ಮಾತನಾಡಿದರು. ಮೊಹಿದಿನ್ ಪಡುಬಿದ್ರೆ ವಂದಿಸಿದರು. ಕಲಂದರ್ ಬಾವ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News