ರೂಟ್, ಬ್ರೆಸ್ಟೊ ಸಿಡಿಲಬ್ಬರದ ಬ್ಯಾಟಿಂಗ್: ದಾಖಲೆ ಗೆಲುವಿನತ್ತ ಇಂಗ್ಲೆಂಡ್

Update: 2022-07-05 02:20 GMT
(AP Photo)

ಬರ್ಮಿಂಗ್‍ ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಕ್ರಿಕೆಟ್ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಜಸ್‍ಪ್ರೀತ್ ಬೂಮ್ರಾ ಅವರ ಅದ್ಭುತ ಪ್ರದರ್ಶನ ಹೊರತಾಗಿಯೂ ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಗೆಲುವಿನ ಸನಿಹ ಬಂದು ನಿಂತಿದೆ.

ನಾಯಕ ಬೂಮ್ರಾ ಭೋಜನ ವಿರಾಮದ ಬಳಿಕ ಇಂಗ್ಲೆಂಡಿನ ಆರಂಭಿಕ ಬ್ಯಾಟ್ಸ್‌ಮನ್‍ಗಳಾದ ಅಲೆಕ್ಸ್ ಲೀಸ್ (65 ಎಸೆತಗಳಲ್ಲಿ 56) ಮತ್ತು ಝೆಕ್ ಕ್ರಾವ್ಲೆ (76 ಎಸೆತಗಳಲ್ಲಿ 46) ಅವರ ವಿಕೆಟ್‍ಗಳನ್ನು ಪಡೆದು ಭಾರತದ ಪಾಳಯದಲ್ಲಿ ಸಂತಸ ಮೂಡಿಸಿದರು. 378 ರನ್‍ಗಳ ಬೆನ್ನಟ್ಟಿದ ಇಂಗ್ಲೆಂಡ್‍ನ ಆರಂಭಿಕ ಜೋಡಿ 107 ರನ್‍ಗಳನ್ನು ಕಲೆ ಹಾಕಿತು.

109 ರನ್‍ಗಳಿಗೆ ಮೂರು ವಿಕೆಟ್‍ಗಳು ಪತನವಾದಾಗ ಜೋ ರೂಟ್ (76 ನಾಟೌಟ್) ಹಾಗೂ ಜಾನಿ ಬ್ರಿಸ್ಟೊ (72 ಬ್ಯಾಟಿಂಗ್) ಮುರಿಯದ ನಾಲ್ಕನೇ ವಿಕೆಟ್‍ಗೆ 197 ಎಸೆತಗಳಲ್ಲಿ 150 ರನ್ ಸೇರಿಸಿ ಇಂಗ್ಲೆಂಡ್ ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿದರು.

ದಿನದ ಆಟದ ಕೊನೆಗೆ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದ್ದು, ಸರಣಿಯಲ್ಲಿ ಸಮಬಲ ಸಾಧಿಸಲು ಕೊನೆಯ ದಿನ ಉಳಿದ 7 ವಿಕೆಟ್‍ಗಳಿಂದ ಕೇವಲ 119 ರನ್ ಗಳಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News