ಪಾಕಿಸ್ತಾನ: ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 10 ಭದ್ರತಾ ಸಿಬ್ಬಂದಿಗೆ ಗಾಯ

Update: 2022-07-05 16:25 GMT

ಇಸ್ಲಮಾಬಾದ್, ಜೂ.5: ಉತ್ತರ ವಝೀರಿಸ್ತಾನ್ನಲ್ಲಿ ಸೋಮವಾರ ಭದ್ರತಾ ಪಡೆಗಳ ವಾಹನ ಸಾಲಿನ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 10 ಭದ್ರತಾ ಸಿಬಂದಿಗೆ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ವಝಿರಿಸ್ತಾನದ ಮಿರಾಲಿಯಿಂದ ಮಿರಾಮ್ಶಾಹ್ನಲ್ಲಿರುವ ಪ್ರಧಾನ ಕಚೇರಿಗೆ ಭದ್ರತಾ ಪಡೆಗಳ ವಾಹನಗಳು ತೆರಳುತ್ತಿದ್ದಾಗ , ಖಾದಿ ಮಾರ್ಕೆಟ್ ಬಳಿ ವಾಹನಗಳ ಸಾಲಿನ ಬಳಿ ಬೈಕ್ನಲ್ಲಿ ಬಂದ ಆತ್ಮಹತ್ಯಾ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ .
 ಇದರಿಂದ 10 ಭದ್ರತಾ ಸಿಬಂದಿ ಗಾಯಗೊಂಡಿದ್ದು ಮೂವರಿಗೆ ಗಂಭೀರ ಗಾಯವಾಗಿದೆ. 
ಗಾಯಗೊಂಡವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉತ್ತರ ವಝೀರಿಸ್ತಾನ್ನ ಉಪಾಯುಕ್ತ ಶಾಹಿದ್ ಅಲಿಖಾನ್ ಹೇಳಿದ್ದಾರೆ. ದಾಳಿ ನಡೆದ ತಕ್ಷಣ ಭದ್ರತಾ ಪಡೆ ಸ್ಥಳವನ್ನು ಸುತ್ತುವರಿದಿದೆ. ಮಿರಾಲಿ-ಮಿರಾಮ್ಶಾ ರಸ್ತೆಯನ್ನು ಮುಚ್ಚಲಾಗಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ‘ದಿ ಡಾನ್’ ಪತ್ರಿಕೆ ವರದಿ ಮಾಡಿದೆ. 
ಶೋಧ ಕಾರ್ಯಾಚರಣೆ ಮುಂದುವರಿದಿದ್ದು ಇದುವರೆಗೆ ಯಾವುದೇ ಗುಂಪು ಸ್ಫೋಟದ ಹೊಣೆ ಹೊತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News