ದೇಶದ್ರೋಹದ ಆರೋಪದಲ್ಲಿ ಬಂಧನದಲ್ಲಿದ್ದ ರಶ್ಯದ ವಿಜ್ಞಾನಿ ಮೃತ್ಯು

Update: 2022-07-05 16:50 GMT

ಲಂಡನ್, ಜು.5: ದೇಶದ್ರೋಹದ ಆರೋಪದಲ್ಲಿ ಕಳೆದ ವಾರ ಸೈಬೀರಿಯಾದಲ್ಲಿ ಬಂಧನಕ್ಕೆ ಒಳಗಾಗಿದ್ದ ರಶ್ಯದ ವಿಜ್ಞಾನಿ ಡಿಮಿಟ್ರಿ ಕೋಲ್ಕರ್ (54 ವರ್ಷ) ಅನಾರೋಗ್ಯ ಉಲ್ಬಣಿಸಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಕೋಲ್ಕರ್ಗೆ ಆಸ್ಪತ್ರೆಯಲ್ಲಿ ನಳಿಕೆಯ ಮೂಲಕ ದ್ರವಾಹಾರ ನೀಡಲಾಗುತ್ತಿತ್ತು. 


ಇಂತಹ ಪರಿಸ್ಥಿತಿಯಲ್ಲೂ ಅವರನ್ನು ರಶ್ಯದ ಅಧಿಕಾರಿಗಳು ಆಸ್ಪತ್ರೆಯ ಹಾಸಿಗೆಯಿಂದ ಬಲವಂತವಾಗಿ ಲೆಫೊರ್ಟೋವೊ ಜೈಲಿಗೆ ಕರೆದೊಯ್ದಿದ್ದು ಬಂಧನದಲ್ಲಿಟ್ಟಿದ್ದಾರೆ. ಆದರೆ ಅಲ್ಲಿ ಕಾಯಿಲೆ ಬಿಗಡಾಯಿಸಿದಾಗ 2 ದಿನದ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
 
ಸರಕಾರದ ರಹಸ್ಯ ಮಾಹಿತಿಯನ್ನು ಚೀನಾಕ್ಕೆ ಹಸ್ತಾಂತರಿಸಿದ ಆರೋಪ ಕೋಲ್ಕರ್ ಮೇಲಿದೆ. ಅವರೋರ್ವ ವಿಜ್ಞಾನಿಯಾಗಿದ್ದು ದೇಶವನ್ನು ಪ್ರೀತಿಸುತ್ತಿದ್ದರು. ವಿದೇಶದ ಹಲವು ವಿವಿಗಳಲ್ಲಿ ಆಕರ್ಷಕ ವೇತನದ ಹುದ್ದೆಯ ಆಹ್ವಾನ ಬಂದಿದ್ದರೂ ನಿರಾಕರಿಸಿ ದೇಶಕ್ಕೇ ತಮ್ಮ ಸೇವೆಯನ್ನು ಮೀಸಲಾಗಿಟ್ಟಿದ್ದರು ಎಂದವರ ಸೋದರಳಿಯ ಆ್ಯಂಟನ್ ಡಯನೋವ್ ಹೇಳಿದ್ದಾರೆ. 

ಚೀನಾದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೋಲ್ಕರ್ ಅಲ್ಲಿ ಮಾಡಿದ್ದ ಭಾಷಣದ ಆಧಾರದಲ್ಲಿ ಅವರ ವಿರುದ್ಧ ದೇಶದ್ರೋಹ ಆರೋಪ ಹೊರಿಸಲಾಗಿದೆ. 
ರಶ್ಯದ ಎಫ್ಎಸ್ಬಿ ಅಧಿಕಾರಿಗಳು ಕೋಲ್ಕರ್ರನ್ನು ಬಂಧಿಸುವ ಮುನ್ನ ಅವರ ಮನೆಯನ್ನು ಶೋಧಿಸಿದ್ದರು ಎಂದು ಹೇಳಿರುವ ವಕೀಲರು, ಕೋಲ್ಕರ್ ಬಂಧನದ ಬಗ್ಗೆ ಪ್ರಶ್ನಿಸಿ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News