ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ

Update: 2022-07-06 14:43 GMT

ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂ.ಏರಿಕೆ

ಹೊಸದಿಲ್ಲಿ,ಜು.6: ಅಗತ್ಯ ವಸ್ತುಗಳ ಬೆಲೆಏರಿಕೆಯಿಂದ ತತ್ತರಿಸುತ್ತಿರುವ ಈ ದೇಶದ ಜನರು ಬುಧವಾರ ಇನ್ನೊಂದು ಆಘಾತಕ್ಕೊಳಗಾಗಿದ್ದಾರೆ. ಗೃಹಬಳಕೆಯ 14.2ಕೆ.ಜಿ.ತೂಕದ ಎಲ್‌ಪಿಜಿ ಸಿಲಿಂಡರ್‌ನೆ ಬೆಲೆಯನ್ನು 50 ರೂ.ಏರಿಕೆ ಮಾಡಲಾಗಿದ್ದು,ತಕ್ಷಣದಿಂದಲೇ ಜಾರಿಗೊಂಡಿದೆ.

ದಿಲ್ಲಿಯಲ್ಲಿ ಈಗ ಪ್ರತಿ ಸಿಲಿಂಡರ್‌ನ ಬೆಲೆ 1,053 ರೂ.ಗಳಾಗಿವೆ.

ಪ್ರತಿ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ ಕೋಲ್ಕತಾದಲ್ಲಿ ರೂ.1,079, ಮುಂಬೈನಲ್ಲಿ ರೂ.1052.50 ಮತ್ತು ಚೆನ್ನೈನಲ್ಲಿ ರೂ.1068.50 ಆಗಿವೆ.

ಇದರೊಂದಿಗೆ ಮೇ ತಿಂಗಳಿನಿಂದ ಮೂರನೇ ಬಾರಿಗೆ ಮತ್ತು ಈ ವರ್ಷದಲ್ಲಿ ನಾಲ್ಕನೇ ಬಾರಿಗೆ ಎಲ್‌ಪಿಜಿ ಬೆಲೆಗಳಲ್ಲಿ ಏರಿಕೆಯಾಗಿದೆ.

2021 ಜೂನ್‌ನಿಂದ ಪ್ರತಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಒಟ್ಟಾರೆ 244 ರೂ.ಏರಿಕೆಯಾಗಿದೆ.

ಇದೇ ವೇಳೆ ಬುಧವಾರ ವಾಣಿಜ್ಯ ಬಳಕೆಯ 19 ಕೆ.ಜಿ.ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 8.5 ರೂ.ತಗ್ಗಿಸಲಾಗಿದೆ.

 ದಿಲ್ಲಿ,ಕೋಲ್ಕತಾ,ಮುಂಬೈ ಮತ್ತು ಚೆನ್ನೈಗಳಲ್ಲಿ ಈಗ ವಾಣಿಜ್ಯ ಸಿಲಿಂಡರ್ ಬೆಲೆ ಅನುಕ್ರಮವಾಗಿ ರೂ.2012.50,ರೂ.2132, ರೂ.1,972.50 ಮತ್ತು ರೂ.2,177.50 ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News