ಪುತ್ರ ತೇಜಸ್ವಿಗೆ ಕರೆ ಮಾಡಿ ಲಾಲು ಪ್ರಸಾದ್ ಯಾದವ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

Update: 2022-07-06 04:38 GMT
Photo:PTI

ಪಾಟ್ನಾ: ಪಾಟ್ನಾದ ತಮ್ಮ ಮನೆಯಲ್ಲಿ ರವಿವಾರದಂದು ಬಿದ್ದು ಬಲ ಭುಜದ ಮೂಳೆ ಮುರಿತಕ್ಕೊಳಗಾದ ಆರ್‌ಜೆಡಿ ವರಿಷ್ಠ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಚಾರಿಸಿದ್ದಾರೆ.

 “ಪ್ರಧಾನಿ ಮಂಗಳವಾರ ತೇಜಸ್ವಿ ಯಾದವ್ ಅವರೊಂದಿಗೆ ಮಾತನಾಡಿದ್ದಾರೆ ಹಾಗೂ  ಆರ್‌ಜೆಡಿ ವರಿಷ್ಠರ ಆರೋಗ್ಯವನ್ನು ವಿಚಾರಿಸಿದ್ದಾರೆ. ಆರ್‌ಜೆಡಿ ಮುಖ್ಯಸ್ಥರು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ಹಾರೈಸಿದ್ದಾರೆ’’ ಎಂದು ಮಂಗಳವಾರ ಆರ್‌ಜೆಡಿ ವಕ್ತಾರ (ಬಿಹಾರ) ಚಿತ್ರರಂಜನ್ ಗಗನ್ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ  ಲಾಲೂ ಪ್ರಸಾದ್ ರವಿವಾರ ಪಾಟ್ನಾದ 10 ಸರ್ಕ್ಯುಲರ್ ರಸ್ತೆಯಲ್ಲಿರುವ ತಮ್ಮ ಮನೆಯ ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಬಳಿಕ  ನಗರದ ಆಸ್ಪತ್ರೆಗೆ ದಾಖಲಿಸಲಾಯಿತು.

74 ವರ್ಷದ ಆರ್‌ಜೆಡಿ ಮುಖ್ಯಸ್ಥರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಲಾಲು ಯಾದವ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ  ಅನೇಕ ವೈದ್ಯರು ಅವರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಆರ್‌ಜೆಡಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News