ಚೀನಾಕ್ಕೆ ತೆರಳುತ್ತಿದ್ದ ಸ್ಪೈಸ್‌ಜೆಟ್ ಕಾರ್ಗೋ ವಿಮಾನ ಕೋಲ್ಕತ್ತಾಗೆ ವಾಪಸ್

Update: 2022-07-06 08:15 GMT
Photo:PTI

ಹೊಸದಿಲ್ಲಿ: ಚೀನಾಕ್ಕೆ  ತೆರಳುತ್ತಿದ್ದ ಸ್ಪೈಸ್‌ಜೆಟ್ ಸರಕು ಸಾಗಣೆ ವಿಮಾನದ  ಹವಾಮಾನ ರೇಡಾರ್ ನಲ್ಲಿ ದೋಷ ಕಂಡುಬಂದ ನಂತರ ನಿನ್ನೆ ಕೋಲ್ಕತ್ತಾಗೆ ಮರಳಿದೆ ಎಂದು ಮೂಲಗಳು ತಿಳಿಸಿವೆ.

ರಿಪೇರಿ ನಂತರ ಏರ್ ಲೈನ್ಸ್ ಸರಕು ಸಾಗಣೆ ಘಟಕ ಸ್ಪೈಸ್ಎಕ್ಸ್ ಪ್ರೆಸ್ ಗೆ ಸೇರಿದ ವಿಮಾನವು ಮತ್ತೆ ಟೇಕ್ ಆಫ್ ಆಗಿದೆ ಎಂದು ತಿಳಿದುಬಂದಿದೆ.  ಸ್ಪೇಸ್ ಜೆಟ್ ಒಂದೇ ದಿನದಲ್ಲಿ ಮೂರನೇ ಬಾರಿ ಅಸಮರ್ಪಕ ಕಾರ್ಯಗಳಿಗೆ ಸಂಬಂಧಿಸಿ ಸಮಸ್ಯೆ ಎದುರಿಸಿದೆ.

ಖಾಸಗಿ ಏರ್ ಕ್ಯಾರಿಯರ್ ಕಳೆದ ಮೂರು ವಾರಗಳಲ್ಲಿ ಎಂಟು ಬಾರಿ ಅಸಮರ್ಪಕ ಘಟನೆಗಳನ್ನು ವರದಿ ಮಾಡಿದೆ . ಇದರಲ್ಲಿ  ಯಾವುದೇ  ಸಿಬ್ಬಂದಿ ಅಥವಾ ಪ್ರಯಾಣಿಕರಿಗೆ ಗಂಭೀರ ಹಾನಿಯಾಗಿಲ್ಲ.

ನಿನ್ನೆ ವರದಿಯಾದ ಮೊದಲ ಘಟನೆಯಲ್ಲಿ  ದಿಲ್ಲಿಯಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ  ಇಂಧನ ಸೂಚಕವು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ನಂತರ ಪಾಕಿಸ್ತಾನದ ಕರಾಚಿಯ ವಿಮಾನ ನಿಲ್ದಾಣದಲ್ಲಿ ನಿಗದಿತ ರೀತಿಯಲ್ಲಿ ಲ್ಯಾಂಡಿಂಗ್ ಮಾಡಬೇಕಾಯಿತು. ಪೈಲಟ್‌ಗಳು ಇಂಧನ ಸೋರಿಕೆಯನ್ನು ಶಂಕಿಸಿದ್ದಾರೆ ಹಾಗೂ  ಸುರಕ್ಷಿತವಾಗಿರಲು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದರು. ಭಾರತದಿಂದ ಕಳುಹಿಸಲಾದ ಪರ್ಯಾಯ ವಿಮಾನವು 138 ಪ್ರಯಾಣಿಕರನ್ನು  ಯುಎಇಗೆ ಕರೆದೊಯ್ಯುವ ಮೊದಲು  ಪ್ರಯಾಣಿಕರು ಕರಾಚಿಯಲ್ಲಿ ಸುಮಾರು 11 ಗಂಟೆಗಳ ಕಾಲ ಕಾಯಬೇಕಾಯಿತು.

ನಿನ್ನೆ ಕಾಂಡ್ಲಾ (ಗುಜರಾತ್)ದಿಂದ  ಮುಂಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಹೊರಗಿನ ವಿಂಡ್‌ಶೀಲ್ಡ್ ಹಾರಾಟ ನಡೆಸುತ್ತಿದ್ದಾಗ  ಬಿರುಕು ಬಿಟ್ಟ ನಂತರ ಮುಂಬೈನಲ್ಲಿ ವಿಮಾನವನ್ನು  ಲ್ಯಾಂಡಿಂಗ್ ಮಾಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News