6,500 ಕಿ.ಮೀ. ಪಾದಯಾತ್ರೆ ನಡೆಸಿ ಸೌದಿ ತಲುಪಿದ ಬ್ರಿಟನ್‌ನ ಹಜ್ ಯಾತ್ರಿ

Update: 2022-07-06 18:33 GMT

ಜಿದ್ದಾ, ಜು.6: ಪಾದಯಾತ್ರೆ ನಡೆಸಿ ಹಜ್ ನಿರ್ವಹಿಸುವ ಬ್ರಿಟನ್‌ನ ಹಜ್ ಯಾತ್ರಿ ಆದಂ ಮುಹಮ್ಮದ್ ಅವರ ಕನಸು ಕಡೆಗೂ ನನಸಾಗಿದ್ದು ಬ್ರಿಟನ್‌ನಿಂದ 6,500 ಕಿಮೀ ಪಾದಯಾತ್ರೆ ನಡೆಸಿ ಸೌದಿ ಅರೆಬಿಯಾ ತಲುಪಿದ್ದಾರೆ.

 52 ವರ್ಷದ ಮುಹಮ್ಮದ್ ಬ್ರಿಟನ್‌ನಿಂದ ನೆದರ್ಯ್ಲಾಂಡ್, ಜರ್ಮನಿ, ಜೆಕ್ ಗಣರಾಜ್ಯ, ಹಂಗೇರಿ, ರೊಮಾನಿಯಾ, ಬಲ್ಗೇರಿಯಾ, ಟರ್ಕಿ, ಲೆಬನಾನ್, ಸಿರಿಯಾ ಮತ್ತು ಜೋರ್ಡಾನ್ ದೇಶಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗಿ ಸೌದಿ ತಲುಪಿದ್ದಾರೆ. ಸುಮಾರು 6,500 ಕಿ.ಮೀ ದೂರವನ್ನು 11 ತಿಂಗಳು 26 ದಿನದಲ್ಲಿ ಕ್ರಮಿಸಿದ್ದಾರೆ. ದಿನಾ ಸರಾಸರಿ 17.8 ಕಿಮೀ ನಡೆದು ಮಕ್ಕಾದ ಆಯಿಷಾ ಮಸೀದಿಯನ್ನು ಜೂನ್ 26ರಂದು ತಲುಪಿದ್ದಾರೆ. ಸೌದಿಯಲ್ಲಿ ಯಾತ್ರಿಗಳ ತಂಡ, ಸ್ಥಳೀಯರು ಹಾಗೂ ಬ್ರಿಟನ್‌ನಿಂದ ವಿಮಾನದ ಮೂಲಕ ಸೌದಿ ತಲುಪಿದ್ದ ಮುಹಮ್ಮದ್ ಅವರ ಇಬ್ಬರು ಪುತ್ರಿಯರು ಹಾರ್ದಿಕವಾಗಿ ಸ್ವಾಗತಿಸಿದರು.

ಕೊರೋನ ಸಾಂಕ್ರಾಮಿಕದಿಂದಾಗಿ ಜಗತ್ತಿನಲ್ಲೆಡೆ ಲಾಕ್‌ಡೌನ್ ಜಾರಿಯಾದ ಸಂದರ್ಭ ದಿನಾ ಪವಿತ್ರ ಖುರ್ ಆನ್ ಓದುತ್ತಿದ್ದೆ. ಆಗ ಒಂದು ದಿನ ನನ್ನೊಳಗಿನ ಯಾವುದೋ ಒಂದು ಶಕ್ತಿ ಕಾಲ್ನಡಿಗೆಯಲ್ಲಿ ಮಕ್ಕಾಯಾತ್ರೆ ನಡೆಸಲು ನನಗೆ ಸೂಚಿಸಿತು. ಕಡೆಗೂ ಈ ಬಯಕೆ ಈಡೇರಿರುವುದು ಖುಷಿ ತಂದಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News