ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಇಂದು ರಾಜೀನಾಮೆ ಸಾಧ್ಯತೆ: ವರದಿ

Update: 2022-07-07 08:58 GMT

ಲಂಡನ್: ಬೋರಿಸ್ ಜಾನ್ಸನ್ ಅವರು ಗುರುವಾರ ಬ್ರಿಟಿಷ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಲಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಹೊಸದಾಗಿ ನೇಮಕಗೊಂಡ ಸಚಿವರು ಮತ್ತು 50 ಕ್ಕೂ ಹೆಚ್ಚು ಇತರರು ಬಂಡಾಯವೆದ್ದು ಕೈಬಿಟ್ಟ ನಂತರ ಬೋರಿಸ್‌ ಜಾನ್ಸನ್ ಸರ್ಕಾರವು ಅಪಾಯದ ಅಂಚಿನಲ್ಲಿದೆ.

ಕಳೆದ ಎರಡು ಗಂಟೆಗಳಲ್ಲಿ ಇಬ್ಬರು ರಾಜ್ಯ ಕಾರ್ಯದರ್ಶಿಗಳು ಸೇರಿದಂತೆ ಎಂಟು ಸಚಿವರು ರಾಜೀನಾಮೆ ನೀಡುವುದರೊಂದಿಗೆ, ಅಸಹಾಯಕರಾಗಿರುವ ಜಾನ್ಸನ್ ಅನಿವಾರ್ಯತೆಗೆ ತಲೆಬಾಗಲು ಮತ್ತು ನಂತರ ಅವರು ಕೆಳಗಿಳಿಯುವುದಾಗಿ ಘೋಷಿಸಲು ಸಿದ್ಧರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

"ಬೋರಿಸ್ ಜಾನ್ಸನ್ ಇಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ" ಎಂದು ಬಿಬಿಸಿಯ ರಾಜಕೀಯ ಸಂಪಾದಕ ಕ್ರಿಸ್ ಮೇಸನ್ ಹೇಳಿದ್ದಾರೆ.

ಹ;ವಾರು ದಿನಗಳ ಕಾಲ ಪರಿಶ್ರಮಿಸಿದರೂ ಕೂಡಾ, ಬೋರಿಸ್ ಜಾನ್ಸನ್‌ ರ ಬೆರಳೆಣಿಕೆಯ ಮಿತ್ರರನ್ನು ಹೊರತುಪಡಿಸಿ ಎಲ್ಲರೂ ಬಂಡಾಯದಲ್ಲಿ ಪಾಲ್ಗೊಂಡಿದ್ದಾರೆ. ಬುಧವಾರವಷ್ಟೇ ಹುದ್ದೆಗೆ ನೇಮಕಗೊಂಡ ಅವರ ಹಣಕಾಸು ಸಚಿವ ನಧಿಮ್ ಜಹಾವಿ ಕೂಡ ತಮ್ಮ ಮುಖ್ಯಸ್ಥರನ್ನು ರಾಜೀನಾಮೆ ನೀಡುವಂತೆ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News