ಬ್ರಿಟನ್‌ ಪ್ರಧಾನಮಂತ್ರಿ ಹುದ್ದೆಗೆ ಭಾರತೀಯ ಮೂಲದ ರಿಷಿ ಸುನಕ್ ಸಂಭಾವ್ಯ ಅಭ್ಯರ್ಥಿ

Update: 2022-07-07 12:25 GMT

ಲಂಡನ್: ಬೊರಿಸ್ ಜಾನ್ಸನ್ ರಾಜಿನಾಮೆಯಿಂದ ತೆರವಾದ ಬ್ರಿಟನ್‌ ಪ್ರಧಾನಮಂತ್ರಿ ಹುದ್ದೆಗೆ ರಿಷಿ ಸುನಕ್ ಸಂಭಾವ್ಯ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಇದು ನಡೆದಲ್ಲಿ, ರಿಷಿ ಅವರು ಬ್ರಿಟಿಷ್ ಪ್ರಧಾನಿಯಾದ   ಭಾರತೀಯ ಮೂಲದ ಮೊದಲ ವ್ಯಕ್ತಿಯಾಗಲಿದ್ದಾರೆ.
 
ಫೆಬ್ರವರಿ 2020 ರಲ್ಲಿ ರಿಷಿ ಸುನಕ್ ಅವರನ್ನು ಖಜಾನೆಯ ಚಾನ್ಸೆಲರ್ ಆಗಿ ಬೋರಿಸ್ ಜಾನ್ಸನ್ ಅವರು ನೇಮಿಸಿದ್ದರು.  ಸಾಂಕ್ರಾಮಿಕ ರೋಗದ ಸಮಯದಲ್ಲಿ ವ್ಯಾಪಾರಿಗಳು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಹತ್ತಾರು ಶತಕೋಟಿ ಪೌಂಡ್‌ಗಳ ಬೃಹತ್ ಪ್ಯಾಕೇಜ್ ಅನ್ನು ಅವರು ರೂಪಿಸಿದ ನಂತರ ಹೆಚ್ಚು ಜನಪ್ರಿಯರಾದರು.

ರಿಷಿ ಸುನಕ್ ಅವರ ಅಜ್ಜಿ ಪಂಜಾಬ್‌ನಿಂದ ಬ್ರಿಟನ್‌ನಲ್ಲಿ ಹೋಗಿ ನೆಲೆಸಿದ್ದರು. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರೊಂದಿಗಿನ ವೈವಾಹಿಕ ಸಂಬಂಧದಲ್ಲಿ ರಿಷಿ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News