ಗೂಢಚರ್ಯೆ ಆರೋಪ: ಇರಾನ್ ನಲ್ಲಿ ಬ್ರಿಟನ್ ರಾಜತಾಂತ್ರಿಕರ ಬಂಧನ

Update: 2022-07-07 17:51 GMT

 ಟೆಹ್ರಾನ್, ಜು.7: ಗೂಢಚಾರಿಕೆ ಆರೋಪದಲ್ಲಿ ಬ್ರಿಟನ್ ಸೇರಿದಂತೆ ಹಲವು ವಿದೇಶಿ ರಾಜತಾಂತ್ರಿಕರನ್ನು ಇರಾನ್ನ ರೆವೊಲ್ಯುಷನರಿ ಗಾರ್ಡ್ಸ್ ಪಡೆ ಬಂಧಿಸಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ. ಬ್ರಿಟನ್ ಸೇರಿದಂತೆ ಹಲವು ವಿದೇಶಿ ರಾಜತಾಂತ್ರಿಕರಲು ಇರಾನ್ನಲ್ಲಿ ಗೂಢಚಾರಿಕೆ ಮಾಡುತ್ತಿರುವುದನ್ನು ನಮ್ಮ ಗುಪ್ತಚರ ಇಲಾಖೆ ಪತ್ತೆಹಚ್ಚಿದ ಬಳಿಕ ಅವರನ್ನು ಬಂಧಿಸಲಾಗಿದೆ. ಬ್ರಿಟನ್ನ ರಾಜತಾಂತ್ರಿಕರನ್ನು ದೇಶದಿಂದ ಉಚ್ಛಾಟಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2018ರಿಂದಲೂ ಇರಾನ್ನಲ್ಲಿ ಬ್ರಿಟನ್ ರಾಯಭಾರಿ ಕಚೇರಿಯ ಉಪಮುಖ್ಯಸ್ಥರಾಗಿರುವ ವಿಟೇಕರ್ ತಮ್ಮ ಕುಟುಂಬದ ಜತೆ ಪ್ರವಾಸಕ್ಕೆ ತೆರಳುವ ನೆಪದಲ್ಲಿ ಇರಾನ್ನ ಸೇನಾನೆಲೆಯ ಸುತ್ತಮುತ್ತ ಸಂಚರಿಸಿ ಹಲವು ಮಹತ್ವದ ವೀಡಿಯೊಗಳನ್ನು ದಾಖಲಿಸಿರುವುದು ಪತ್ತೆಯಾಗಿದೆ. ಅವರನ್ನು ಬಂಧಿಸಿದ ಬಳಿಕ ಕ್ಷಮೆ ಯಾಚಿಸಿದ್ದರಿಂದ ದೇಶದಿಂದ ಉಚ್ಛಾಟಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News