ಹಜ್ಜಾಜ್ ಗಳ ಸೇವೆಯಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ತಂಡ

Update: 2022-07-08 06:35 GMT

ಮಕ್ಕಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯಾ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಜ್ಜ್ ವೋಲೆಂಟರ್ ಕೋರ್ (HVC) ತಂಡವು ಹಜ್ಜಾಜ್ ಗಳ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಕಳೆದ ಎರಡು ವರ್ಷಗಳು ಕೋವಿಡ್ ಕಾರಣದಿಂದಾಗಿ ಹಜ್ಜಾಜ್ ಗಳ ಸೇವೆ ಮಾಡಲು ಅವಕಾಶವಿರಲಿಲ್ಲ. ಆದರೆ ಈ ವರ್ಷ ಸೀಮಿತವಾದ ಅವಕಾಶ ಸಿಕ್ಕಿದ್ದು, ಅದರಂತೆ ಹೆಚ್ ವಿ ಸಿ ಚೇರ್ಮಾನ್ ಹಂಝಾ ಮೈಂದಾಳ, ಕನ್ವೀನರ್ ಇಬ್ರಾಹಿಮ್ ಕಿನ್ಯಾ, ಮಕ್ಕಾ ಕ್ಯಾಪ್ಟನ್ ಮೂಸಾ ಹಾಜಿ ಕಿನ್ಯಾ ಹಾಗೂ ಮದೀನಾ ಕ್ಯಾಪ್ಟನ್ ರಝ್ಝಾಕ್ ಉಳ್ಳಾಲರವರ ನೇತ್ರತ್ವದಲ್ಲಿ ಕೆಸಿಎಫ್ ಹೆಚ್ ವಿ ಸಿ 2022 ತಂಡವು ಕಾರ್ಯಾಚರಿಸುತ್ತಿದೆ.

ಪವಿತ್ರ ಮದೀನಾಕ್ಕೆ ಭಾರತದಿಂದ ಆಗಮಿಸಿದ ಮೊದಲ ಹಜ್ಜಾಜ್ ಗಳ ತಂಡವನ್ನು ಸ್ವೀಕರಿಸುವ ಮೂಲಕ 2022ರ ಕೆಸಿಎಫ್ ತಂಡವು ತಮ್ಮ ಸೇವೆಯನ್ನು ಆರಂಭಿಸಿದ್ದಾರೆ. ಈ ಸೇವೆಯು ಭಾರತದ ಕೊನೆಯ ಹಜ್ಜಾಜ್ ಗಳ ತಂಡ ಸೌದಿ ಅರೇಬಿಯಾದಿಂದ ಹಿಂತಿರುಗುವ ವರೆಗೆ ಮುಂದುವರಿಯಲಿದೆ.

ಇವರ ಸೇವೆಯನ್ನು ಮೆಚ್ಚಿ ಈ ಮೊದಲು ಕಾರ್ಯಾಚರಿಸಿದ ಎಲ್ಲಾ ವರ್ಷಗಳಲ್ಲಿಯೂ ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯಿಂದ ಅಭಿನಂದನಾ ಪತ್ರ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News