ಖ್ಯಾತ ತಮಿಳು ನಟ ವಿಕ್ರಮ್ ಎದೆನೋವಿನಿಂದ ಆಸ್ಪತ್ರೆಗೆ ದಾಖಲು
ಚೆನ್ನೈ: ಎದೆ ನೋವು ಕಾರಣ ತಮಿಳು ಚಿತ್ರರಂಗದ ಖ್ಯಾತ ನಟ ವಿಕ್ರಮ್ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಕ್ರಮ್ ರ ಮ್ಯಾನೇಜರ್ ಸೂರ್ಯನಾರಾಯಣನ್ ಎಂ ಟ್ವೀಟ್ ಮಾಡಿ ಈ ಕುರಿತು ಮಾಹಿತಿ ನೀಡಿದ್ದು, “ಚಿಯಾನ್ ವಿಕ್ರಮ್ ಅವರಿಗೆ ಸಣ್ಣ ಎದೆ ನೋವು ಬಂದಿತ್ತು ಮತ್ತು ಅದಕ್ಕಾಗಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ವರದಿಗಳು ಹೇಳುವಂತೆ ಅವರಿಗೆ ಹೃದಯಾಘಾತವಾಗಿರಲಿಲ್ಲ. ಅವರ ಸ್ಥಿತಿಯ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆಸ್ಪತ್ರೆಯಿಂದ ಔಪಚಾರಿಕ ಬುಲೆಟಿನ್ ನಿರೀಕ್ಷಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಮಣಿರತ್ನಂ ನಿರ್ದೇಶನದ ತನ್ನ ಮುಂಬರುವ ಚಿತ್ರ ಪೊನ್ನಿಯಿನ್ ಸೆಲ್ವನ್‌ನ ಟೀಸರ್ ಬಿಡುಗಡೆ ಮಾಡಲು ವಿಕ್ರಮ್ ಶುಕ್ರವಾರ ಸಂಜೆ ಸಮಾರಂಭದಲ್ಲಿ ಎಲ್ಲಾ ತಾರಾ ಬಳಗದೊಂದಿಗೆ ಭಾಗವಹಿಸಬೇಕಿತ್ತು.
Dear fans and wellwishers,
— Suryanarayanan M (@sooriaruna) July 8, 2022
Chiyaan Vikram had mild chest discomfort and is being treated for the same. He DID NOT have a heart attack as reports falsely claim. We are pained to hear rumours to this effect.
That being said, we request you to give him and the family the.... 1/2