ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಸ್ಫರ್ಧಿಸುವುದಾಗಿ ಭಾರತೀಯ ಮೂಲದ ರಿಷಿ ಸುನಾಕ್‌ ಘೋಷಣೆ

Update: 2022-07-08 18:10 GMT

ಲಂಡನ್:  ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ನಂತರ ತೆರವಾದ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಮಾಜಿ ಚಾನ್ಸೆಲರ್ ರಿಷಿ ಸುನಾಕ್ ಅವರು ಸ್ಪರ್ಧಿಸುತ್ತಿದ್ದಾರೆ.

"ಯಾರಾದರೂ ಈ ಕ್ಷಣವನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿಯೇ ನಾನು ಕನ್ಸರ್ವೇಟಿವ್ ಪಕ್ಷದ ಮುಂದಿನ ನಾಯಕ ಮತ್ತು ನಿಮ್ಮ ಪ್ರಧಾನಿಯಾಗಲು ನಿಂತಿದ್ದೇನೆ" ಎಂದು ಸುನಾಕ್ ಟ್ವೀಟ್‌ ಮಾಡಿದ್ದಾರೆ. 
 
ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಕ್ಯಾಬಿನೆಟ್‌ನಿಂದ ಸುನಾಕ್ ಅವರ ರಾಜೀನಾಮೆ ನೀಡಿದ ಬಳಿಕ ಇತರ ಮಂತ್ರಿಗಳೂ ನಿರ್ಗಮಿಸಿದ್ದರು. ಇದರ ಬೆನ್ನಲ್ಲೇ  ಬೋರಿಸ್‌ ಜಾನ್ಸನ್‌ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು. 

ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಕ್ ಭಾರತೀಯ ಮೂಲದವರು. ಅವರ ಅಜ್ಜಿ ಪಂಜಾಬ್‌ನಿಂದ ಬ್ರಿಟನ್‌ಗೆ ತೆರಳಿ ಅಲ್ಲಿಯೇ ನೆಲೆಸಿದವರು.   ರಿಷಿ ಸುನಾಕ್ ಅವರು ಪ್ರಧಾನಿ ಸ್ಥಾನವನ್ನು ಗೆದ್ದರೆ, ಅವರು ಬ್ರಿಟಿಷ್ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News