ಅಧಿಕೃತ ನಿವಾಸ ಸುತ್ತುವರಿದ ಪ್ರತಿಭಟನಾಕಾರರು: ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ ಪಲಾಯನ

Update: 2022-07-09 09:28 GMT

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಶನಿವಾರ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ. ಪ್ರತಿಭಟನಾಕಾರರು ಅಧ್ಯಕ್ಷರ ಮನೆಯನ್ನು ಸುತ್ತುವರಿದಿದ್ದರು  ಎಂದು ಉನ್ನತ ರಕ್ಷಣಾ ಮೂಲವು ಎಎಫ್‌ಪಿಗೆ ತಿಳಿಸಿದೆ.

ನಾಯಕನ ರಾಜೀನಾಮೆಗೆ ಒತ್ತಾಯಿಸಿ  ಪ್ರತಿಭಟನಾಕಾರರು ಅಧ್ಯಕ್ಷರ ಮನೆಯ  ಕಾಂಪೌಂಡ್‌ ನೊಳಗೆ ನುಗ್ಗುತ್ತಿರುವ ದೃಶ್ಯಗಳು ಟಿವಿಯಲ್ಲಿ ಕಂಡುಬಂದಿದೆ.

"ಅಧ್ಯಕ್ಷರನ್ನು ಸುರಕ್ಷಿತವಾಗಿ  ಕರೆದೊಯ್ಯಲಾಯಿತು. ಆಕ್ರೋಶಗೊಂಡಿರುವ  ಜನಸಮೂಹ ಅಧ್ಯಕ್ಷರ ಭವನವನ್ನು ಅತಿಕ್ರಮಿಸುವುದನ್ನು ತಡೆಯಲು ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು’’ ಎಂದು ಮೂಲಗಳು ತಿಳಿಸಿವೆ.

 ಬಿಕ್ಕಟ್ಟು ಪೀಡಿತ ದೇಶದಲ್ಲಿ ಈ ವರ್ಷ ನಡೆದ ಅತಿದೊಡ್ಡ ಸರಕಾರಿ ವಿರೋಧಿ ಪ್ರತಿಭಟನೆಯಲ್ಲಿ  ಜಮಾಯಿಸಿದ್ದ  ಸಾವಿರಾರು ಜನರನ್ನು ನಿಯಂತ್ರಿಸಲು ವಾಣಿಜ್ಯ ರಾಜಧಾನಿಯಲ್ಲಿ ಪ್ರತಿಭಟನಾಕಾರರ ಮೇಲೆ ಶ್ರೀಲಂಕಾ ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News