×
Ad

ಫಿಸಿಯೋ ಥೆರಪಿ-ಪುನರ್ವಸತಿ ಕೇಂದ್ರ ‘ಫಿಸಿಯೋ ಕೇರ್’ ಉದ್ಘಾಟನೆ

Update: 2022-07-09 21:05 IST

ಉಡುಪಿ : ಗಿರಿಜಾ ಗ್ರೂಪ್ ಆಫ್ ಕನ್‌ರ್ಸನ್ಸ್ ವತಿಯಿಂದ ಉಡುಪಿ ನಗರದ ಮಿತ್ರಾ ಆಸ್ಪತ್ರೆ ಬಳಿಯ ವಾದಿರಾಜ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಿಸಲಾದ ಫಿಸಿಯೋ ಥೆರಪಿ ಮತ್ತು ಪುನರ್ವಸತಿ ಕೇಂದ್ರ ‘ಫಿಸಿಯೋ ಕೇರ್’ನ ಉದ್ಘಾಟನೆ ಶನಿವಾರ ನಡೆಯಿತು.

ಕೇಂದ್ರವನ್ನು ಐಎಂಎ ಕರಾವಳಿ ಉಡುಪಿ ಶಾಖೆಯ ಅಧ್ಯಕ್ಷ ವಿನಾಯಕ ಶೆಣೈ ಉದ್ಘಾಟಿಸಿ ಶುಭ ಹಾರೈಸಿದರು. ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ದೀಪ ಬೆಳಗಿಸಿದರು.

ಮುಖ್ಯ ಅತಿಥಿಯಾಗಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಮಾತನಾಡಿ, ಇಂದು ನಮ್ಮಲ್ಲಿ ಹಿರಿಯ ನಾಗರಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದುದರಿಂದ ಇಂತಹ ಕೇಂದ್ರ ಗಳ ಅವಶ್ಯಕತೆ ಕೂಡ ಬಹಳಷ್ಟು ಇರುತ್ತದೆ. ಜನರಿಗೆ ತಲುಪುವ ನಿಜವಾದ ಸೇವೆ ಇದಾಗಿದೆ ಎಂದು ಹೇಳಿದರು.

ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಡಾ.ಎನ್. ಟಿ.ಅಂಚನ್, ಮಣಿಪಾಲ ಕೆಎಂಸಿಯ ಫಿಜಿಯೋಥೆರಫಿ ವಿಭಾಗದ ಪ್ರೊಫೆಸರ್ ಭವಾನಿ ಕೃಷ್ಣರಾವ್, ಸುವರ್ಣ ಎಂಟರ್‌ಪ್ರೈಸಸ್‌ನ ಮಧುಸೂದನ್ ಹೇರೂರು, ನಗರಸಭೆ ಸದಸ್ಯೆ ಮಾನಸಿ ಪೈ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮುಖ್ಯ ಅತಿಥಿ ಗಳಾಗಿದ್ದರು.

ಈ ಸಂದರ್ಭದಲ್ಲಿ ಹಾರಾಡಿಯಲ್ಲಿರುವ ಎವಿ ಬಾಳಿಗಾ ಆಸ್ಪತ್ರೆಗೆ ಐಸಿಯು ಬೆಡ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.  ಗಿರಿಜಾ, ಸುರೇಖಾ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು. ಗಿರಿಜಾ ಗ್ರೂಪ್‌ನ ಮುಖ್ಯಸ್ಥ ರವೀಂದ್ರ ಕೆ.ಶೆಟ್ಟಿ ಸ್ವಾಗತಿಸಿದರು. ಸೀನಿಯರ್ ಕನ್ಸಲ್ಟೆಂಟ್ ಫಿಸಿಯೋಥೆರಪಿಸ್ಟ್ ಡಾ.ದೀಪಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

ಈ ಕೇಂದ್ರದಲ್ಲಿ ಸಂಧಿವಾತ, ದೀರ್ಘಕಾಲದ ಸಂಧಿಗಳ ನೋವು, ನರ ಹಾಗೂ ಸ್ನಾಯುಗಳಲ್ಲಿ ನೋವು, ಹೃದ್ರೋಗ, ಮೂಳೆ ಮುರಿತದ ಪುನರ್ವಸತಿ, ಸಂಧಿಗಳ ಮರುಜೋಡಣೆಯ ಪುನರ್ವಸತಿ, ಪಾರ್ಕಿನ್ಸನ್ ಸಿಂಡ್ರೋಮ್, ಆಸ್ಟಿಯೋಪೊರೋಸಿಸ್, ಪಾಶ್ರ್ವವಾಯು ಪುನರ್ವಸತಿ, ಅಲ್ಟ್ರಾ ಸೌಂಡ್, ವಿದ್ಯುತ್ ಪ್ರಚೋದನೆ, ಯಾಂತ್ರಿಕ ಎಳೆತ, ತೇವಾಂಶದ ಶಖ ಚಿಕಿತ್ಸೆ, ಕ್ರೈ ಥೆರಪಿ, ಬ್ಯಾಲೆನ್ಸ್ ಬೋರ್ಡ್, ಸ್ಟೆಪ್ಪರ್, ಥೆರಾಬ್ಯಾಂಡ್ ವ್ಯಾಯಾಮಗಳನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News