ಶಿರ್ವ; ತಂಡದಿಂದ ಯುವಕನ ಅಪಹರಣ: ದೂರು
Update: 2022-07-09 21:17 IST
ಶಿರ್ವ: ತಂಡವೊಂದು ಯುವಕನೊಬ್ಬನನ್ನು ಕಾರಿನಲ್ಲಿ ಬಲವಂತವಾಗಿ ಕುಳ್ಳಿರಿಸಿ ಅಪಹರಿಸಿರುವ ಘಟನೆ ಜು.8ರಂದು ಮಧ್ಯಾಹ್ನ 1ಗಂಟೆಯ ಸುಮಾರಿಗೆ ಪಣಿಯೂರು -ಬೆಳಪು ಮಾರ್ಗದ ಮಧ್ಯೆ ನಡೆದಿದೆ.
ಬೈಕಿನಲ್ಲಿ ಮನೆಯಿಂದ ಬೆಳಪು ಮಸೀದಿಗೆ ಹೋಗುತ್ತಿದ್ದ ಅಬ್ದುಲ್ ಖಾದರ್ ಎಂಬವರ ಮಗ ನೌಫಿಲ್(19) ಎಂಬವರನ್ನು ಮಾರ್ಗ ಮದ್ಯೆ ಕಾರಿನಲ್ಲಿ ಬಂದ ದಾವೂದು ಇಬ್ರಾಹಿಂ ಸೇರಿದಂತೆ ನಾಲ್ಕು ಮಂದಿ ತಂಡ ಅಪಹರಿಸಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.