×
Ad

5ಜಿ ಸ್ಪೆಕ್ಟ್ರಂ ರೇಸ್‌ನಲ್ಲಿ ಅದಾನಿ ಗ್ರೂಪ್: ಜಿಯೊ,ಏರ್ಟೆಲ್ ಗೆ ಸವಾಲು

Update: 2022-07-09 23:07 IST

ಹೊಸದಿಲ್ಲಿ,ಜು.9: ಬಿಲಿಯಾಧೀಶ ಗೌತಮ್ ಅದಾನಿಯವರ ಉದ್ಯಮ ಸಮೂಹವು 5ಜಿ ಸ್ಪ್ರೆಕ್ಟಂ ಖರೀದಿ ಪೈಪೋಟಿಯಲ್ಲಿ ಪಾಲ್ಗೊಳ್ಳಲು ಬಯಸಿದ್ದು,ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೊ ಮತ್ತು ಸುನಿಲ್ ಭಾರ್ತಿ ಮಿತ್ತಲ್ ಅವರ ಏರ್ ಟೆಲ್ ಗೆ ನೇರ ಸವಾಲೊಡ್ಡಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಅಲ್ಟ್ರಾ-ಹೈ-ಸ್ಪೀಡ್ ಅಂತರ್ಜಾಲದಂತಹ 5ಜಿ ದೂರಸಂಪರ್ಕ ಸೇವೆಗಳನ್ನು ಒದಗಿಸಬಲ್ಲ ಸಮರ್ಥರು ಸೇರಿದಂತೆ ಆಸಕ್ತರು ಜು.26ರಂದು ನಡೆಯಲಿರುವ 5ಜಿ ಸ್ಪ್ರೆಕ್ಟ್ರಂ ಹರಾಜಿನಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಲು ಗಡುವು ಶುಕ್ರವಾರಕ್ಕೆ ಅಂತ್ಯಗೊಂಡಿದ್ದು,ಕನಿಷ್ಠ ನಾಲ್ಕು ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಖಾಸಗಿ ಕಂಪೆನಿಗಳಾದ ಜಿಯೊ,ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಜೊತೆ ಅದಾನಿ ಗ್ರೂಪ್ ಸಹ ಅರ್ಜಿಯನ್ನು ಸಲ್ಲಿಸಿದೆ ಎಂದು ತಿಳಿಸಿರುವ ಈ ಮೂಲಗಳು,ಅದಾನಿ ಗ್ರೂಪ್ ಇತ್ತೀಚಿಗೆ ರಾಷ್ಟ್ರೀಯ ದೂರ ಅಂತರ (ಎನ್ಎಲ್ಡಿ) ಮತ್ತು ಅಂತರರಾಷ್ಟ್ರೀಯ ದೂರ ಅಂತರ (ಐಎಲ್ಡಿ) ಪರವಾನಿಗೆಗಳನ್ನು ಪಡೆದುಕೊಂಡಿತ್ತು ಎಂದು ತಿಳಿಸಿವೆ.

ಆದರೆ ಇದನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಲು ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ, ಅದರ ಫೋನ್ ಕರೆಗಳು ಮತ್ತು ಇಮೇಲ್ ಗಳಿಗೆ ಅದಾನಿ ಗ್ರೂಪ್ ಪ್ರತಿಕ್ರಿಯಿಸಿಲ್ಲ.ಹರಾಜು ವೇಳಾಪಟ್ಟಿಯಂತೆ ಅರ್ಜಿದಾರರ ಮಾಲಿಕತ್ವ ವಿವರಗಳನ್ನು ಜು.12ರಂದು ಪ್ರಕಟಿಸಲಾಗುತ್ತದೆ ಮತ್ತು ಆಗ ಬಿಡ್ ದಾರರ ಬಗ್ಗೆ ಮಾಹಿತಿ ಲಭಿಸಲಿದೆ.

ಜು.26ರಿಂದ ಆರಂಭಗೊಳ್ಳಲಿರುವ ಹರಾಜು ಪ್ರಕ್ರಿಯೆಯಲ್ಲಿ ಕನಿಷ್ಠ 4.3 ಲ.ಕೋ.ರೂ. ವೌಲ್ಯದ ಒಟ್ಟು 72,097.85 ಮೆಗಾಹರ್ಟ್ಜ್ ತರಂಗಾಂತರಗಳನ್ನು ಮಾರಾಟಕ್ಕಿಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News