ಅಪಾಯದ ಮಟ್ಟವನ್ನು ಮೀರಿದ ನೇತ್ರಾವತಿ!

Update: 2022-07-10 04:27 GMT

ಬಂಟ್ವಾಳ, ಜು.10: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನೇತ್ರಾವತಿ ನದಿಯಲ್ಲಿ ನಿನ್ನೆಯಿಂದ ನೀರಿ‌ನ ಮಟ್ಟ ಏರುತ್ತಲೇ ಸಾಗಿದ್ದು ರವಿವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಅಪಾಯದ ಮಟ್ಟವನ್ನು ಮೀರಿದೆ. 

ಇಂದು ಬೆಳಗ್ಗೆ 7 ಗಂಟೆಗೆ ನದಿಯಲ್ಲಿ ನೀರಿನ ಮಟ್ಟ 8.5 ಆಗಿತ್ತು. 9 ಗಂಟೆಯ ವೇಳೆಗೆ ನೀರಿನ ಮಟ್ಟ 8.6  ಆಗಿದ್ದು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.

ಶನಿವಾರ ಬೆಳಗ್ಗೆ 8 ಗಂಟೆಗೆ ನದಿಯಲ್ಲಿ ನೀರಿನ ಮಟ್ಟ 6.1 ಮೀಟರ್ ಇದ್ದರೆ, ಮಧ್ಯಾಹ್ನ 2 ಗಂಟೆಯ ವೇಳೆಗೆ 6.8 ಮೀಟರ್ ಗೆ ಏರಿಕೆಯಾಗಿತ್ತು.

ಸಂಜೆ 6 ಗಂಟೆಗೆ ನೀರಿನ ಮಟ್ಟ 7.3 ಮೀಟರ್ ಗೆ ತಲುಪಿದರೆ ರಾತ್ರಿ 11 ಗಂಟೆಯ ವೇಳೆಗೆ 7.7 ಮೀಟರ್ ಗೆ ಏರಿಕೆಯಾಗಿತ್ತು.

ನೇತ್ರಾವತಿ ನದಿಯಲ್ಲಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಇದೀಗ ಅಪಾಯದ ಮಟ್ಟವನ್ನು (8.6) ಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದ ತಗ್ಗು ಪ್ರದೇಶಗಳ ಜನರು ನೆರೆ ಭೀತಿಯನ್ನು ಎದುರಿಸುತ್ತಿದ್ದಾರೆ.

ನೀರಿನ ಮಟ್ಟ ಏರುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಲ್ಲಿ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News