ನೊಯ್ಡಾ ಮೆಟ್ರೊ ನಿಲ್ದಾಣದಲ್ಲಿ ತನ್ನಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳಿಗೆ ಕರೆ : ಯೂಟ್ಯೂಬರ್ ಗೌರವ್ ತನೇಜಾ ಬಂಧನ

Update: 2022-07-10 04:14 GMT
Photo:ANI

ಹೊಸದಿಲ್ಲಿ: ಯೂಟ್ಯೂಬರ್ ಗೌರವ್ ತನೇಜಾ  ತನ್ನ  ಹುಟ್ಟುಹಬ್ಬ ಆಚರಿಸಲು ತನ್ನ   ಅನುಯಾಯಿಗಳನ್ನು  ಮೆಟ್ರೊ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಲು ಕರೆ ನೀಡಿ ಸೆಕ್ಷನ್ 144 ಅನ್ನು ಉಲ್ಲಂಘಿಸಿದ್ದಕ್ಕೆ ಸೆಕ್ಷನ್ 188ರ ಅಡಿಯಲ್ಲಿ ತನೇಜಾರನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ಇಂದು ಬಂಧಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಯೂಟ್ಯೂಬ್ ಚಾನೆಲ್ 'ಫ್ಲೈಯಿಂಗ್ ಬೀಸ್ಟ್' ನಡೆಸುತ್ತಿರುವ ತನೇಜಾ, ನೋಯ್ಡಾದ ಸೆಕ್ಟರ್ 51 ಮೆಟ್ರೋ ನಿಲ್ದಾಣದಲ್ಲಿ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸಿದ್ದರು. ನೊಯ್ಡಾ ಮೆಟ್ರೊ ನಿಲ್ದಾಣದಲ್ಲಿ ತನ್ನಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳಿಗೆ ಕರೆ ನೀಡಿದ್ದರು.

ನಿನ್ನೆ, ತನೇಜಾ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಮೆಟ್ರೋ ನಿಲ್ದಾಣದಲ್ಲಿ ಸೇರಲು ತನ್ನ ಅನುಯಾಯಿಗಳನ್ನು ವಿನಂತಿಸಿ  ಪೋಸ್ಟ್ ಮಾಡಿದ್ದರು. ಇದನ್ನು ಅನುಸರಿಸಿ, ಸಾವಿರಾರು ಜನರು ಸೆಕ್ಟರ್ 51 ಮೆಟ್ರೋ ನಿಲ್ದಾಣಕ್ಕೆ ಬಂದರು. ಇದರಿಂದಾಗಿ ಕಾಲ್ತುಳಿತವಾಯಿತು. ಗೌರವ್ ತನೇಜಾ ಅವರು ಇನ್ ಸ್ಟಾಗ್ರಾಮ್  ನಲ್ಲಿ 3.3 ಮಿಲಿಯನ್ ಗೂ  ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
 ಇನ್‌ಸ್ಟಾಗ್ರಾಮ್‌ನಲ್ಲಿ 1.6 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತನೇಜಾ ಅವರ ಪತ್ನಿ ರಿತು ರಾಥೀ ಅವರು ಇಂದು ಇಡೀ ಮೆಟ್ರೋವನ್ನು ಬುಕ್ ಮಾಡಿದ್ದು, ಅದರಲ್ಲಿ ತನೇಜಾ ಅವರ ಹುಟ್ಟುಹಬ್ಬವನ್ನು ಆಚರಿಸುವುದಾಗಿ ಮತ್ತು ಕೇಕ್ ಕತ್ತರಿಸುವುದಾಗಿ  ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News