ಕುಂದಾಪುರ: ಪ್ರಸಿದ್ಧ ವೈದ್ಯ ಡಾ.ಎ.ಎಸ್.ಕಲ್ಕೂರ್ ನಿಧನ

Update: 2022-07-10 05:51 GMT

ಕುಂದಾಪುರ: ನಗರದಲ್ಲಿ ಪ್ರಸಿದ್ಧ ವೈದ್ಯರಾಗಿದ್ದ ಹಂಗಳೂರಿನ‌ ಯೂನಿಟಿ ಹಾಲ್ ಬಳಿಯ ನಿವಾಸಿ ಡಾ.ಎ.ಎಸ್. ಕಲ್ಕೂರ (87) ಅವರು ವಯೋ ಸಹಜ ಅಸೌಖ್ಯದಿಂದ ಶನಿವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ ಬಳಿಕ ಖಾಸಗಿಯಾಗಿ ಕ್ಲಿನಿಕ್ ತೆರೆದು, ಕಡಿಮೆ ಶುಲ್ಕದಲ್ಲಿ ಸೇವೆ ನೀಡುತ್ತಿದ್ದರು. 50 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಸೇವೆ ಸಲ್ಲಿಸಿದ್ದ ಅವರು ನಾಟಕ, ಯಕ್ಷಗಾನ, ಕಲೆ, ಸಾಹಿತ್ಯದಲ್ಲಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.

ಮೃತರಿಗೆ ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News