ಬಿಜೆಪಿ ಸೇರಲು 40 ಕೋ.ರೂ. ಆಫರ್: ಗೋವಾದ ಮಾಜಿ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆರೋಪ

Update: 2022-07-11 05:24 GMT

ಪಣಜಿ: ಬಿಜೆಪಿ ಸೇರಲು ಪಕ್ಷದ ಶಾಸಕರಿಗೆ 40 ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಎಂದು ಗೋವಾದ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಗಿರೀಶ್ ಚೋಡಂಕರ್ ಆರೋಪಿಸಿದ್ದಾರೆ ಎನ್ನುವುದಾಗಿ India Today ವರದಿ ಮಾಡಿದೆ.

ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ನೇತೃತ್ವದಲ್ಲಿ ಕನಿಷ್ಠ 6 ಕಾಂಗ್ರೆಸ್ ಶಾಸಕರು ಬಿಜೆಪಿ ಪಾಳಯಕ್ಕೆ ಸೇರುತ್ತಾರೆಂಬ ವರದಿಯ ನಡುವೆ ಗಿರೀಶ್ ಈ ಗಂಭೀರ ಆರೋಪ ಮಾಡಿದ್ದಾರೆ.

ಕೈಗಾರಿಕೋದ್ಯಮಿಗಳು ಹಾಗೂ ಕಲ್ಲಿದ್ದಲು ಮಾಫಿಯಾದಿಂದ ಕಾಂಗ್ರೆಸ್ ಶಾಸಕರಿಗೆ ಕರೆಗಳು ಬರುತ್ತಿವೆ. ಈ ಕರೆಯನ್ನು  ಸಂಪರ್ಕಿಸಿದ ಕೆಲವು ಶಾಸಕರು ಕಾಂಗ್ರೆಸ್‌ನ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರಿಗೆ ಬಹಿರಂಗಪಡಿಸಿದ್ದಾರೆ ಎಂದು ಚೋಡಂಕರ್ ಹೇಳಿದ್ದಾರೆ.

ಆದಾಗ್ಯೂ, ಬಿಜೆಪಿಯು ಆರೋಪಗಳನ್ನು ತಳ್ಳಿಹಾಕಿದೆ, ಅದರ ರಾಜ್ಯಾಧ್ಯಕ್ಷ ಸದಾನಂದ್ ತಾನವಡೆ, 'India Today’ಯೊಂದಿಗೆ ಮಾತನಾಡುತ್ತಾ, ನಾವು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದ್ದೇವೆ ಹಾಗೂ ಹಣದ ಆಫರ್ ನೀಡಿದ್ದೇವೆಂದು ಕಾಂಗ್ರೆಸ್ ಹುರುಳಿಲ್ಲದ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.

ಪಕ್ಷದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳನ್ನು ರಾಜ್ಯ ಕಾಂಗ್ರೆಸ್ ಕಟುವಾಗಿ ನಿರಾಕರಿಸುತ್ತಿದ್ದರೂ' ಬಹುತೇಕ ಶಾಸಕರು  ಪಕ್ಷದ ಸಭೆ ಹಾಗೂ   ಪತ್ರಿಕಾಗೋಷ್ಠಿಯಲ್ಲಿ ತೆರಳದೆ ವದಂತಿಗಳನ್ನು ಹುಟ್ಟುಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News