ಒಟ್ಟು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿರುವ ಭಾರತ: ವಿಶ್ವ ಸಂಸ್ಥೆ ವರದಿ

Update: 2022-07-11 08:22 GMT

ಹೊಸದಿಲ್ಲಿ: ಚೀನಾವನ್ನು ಹಿಂದಿಕ್ಕಿ ಮುಂದಿನ ವರ್ಷ ಭಾರತ ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾಗಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ನವೆಂಬರ್ 2022ರ ವೇಳೆಗೆ ಜಗತ್ತಿನ ಜನಸಂಖ್ಯೆ 8 ಬಿಲಿಯನ್‍ಗೆ ತಲುಪಲಿದೆ ಎಂದೂ ವರದಿ ಅಂದಾಜಿಸಿದೆ.

ವಿಶ್ವ ಸಂಸ್ಥೆಯ ಆರ್ಥಿಕ, ಸಾಮಾಜಿಕ ವ್ಯವಹಾರಗಳ, ಜನಸಂಖ್ಯಾ ವಿಭಾಗ ಇಂದು ಬಿಡುಗಡೆಗೊಳಿಸಿದೆ ವಲ್ರ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022 ವರದಿಯಲ್ಲಿ ಈ ಮಾಹಿತಿಯಿದೆ.

2023ರೊಳಗೆ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿರುವ ಭಾರತವು 2050ರ ವೇಳೆಗೆ 1.668 ಬಿಲಿಯನ್ ಜನಸಂಖ್ಯೆಯನ್ನು ಹೊಂದಬಹುದು ಎಂದು ಅಂದಾಜಿಸಲಾಗಿದ್ದು ಈ ವೇಳೆ ಚೀನಾದ ಜನಸಂಖ್ಯೆ 1.317 ಬಿಲಿಯನ್ ಆಗಲಿದೆ.

2050ರ ವೇಳೆಗೆ ಜಗತ್ತಿನಲ್ಲಿ ಏರಿಕೆಯಾಗಲಿರುವ ಜನಸಂಖ್ಯೆಯ ಅರ್ಧದಷ್ಟು  ಕಾಂಗೋ ಗಣರಾಜ್ಯ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪ್ಪೈನ್ಸ್ ಮತ್ತು ತಾಂಜಾನಿಯಾದಲ್ಲಿರಲಿದೆ.

2022ರಲ್ಲಿ ಭಾರತದ ಜನಸಂಖ್ಯೆ 1.412 ಬಿಲಿಯನ್ ಆಗಿದ್ದರೆ ಚೀನಾದ ಜನಸಂಖ್ಯೆ 1.426 ಬಿಲಿಯನ್ ಆಗಿದೆ ಎಂದು ವರದಿ ಹೇಳಿದೆ.

ಜಗತ್ತಿನ ಜನಸಂಖ್ಯೆ 2030ರ ವೇಳೆಗೆ 8.5 ಬಿಲಿಯನ್ ಆಗಲಿದೆ ಹಾಗೂ 2050ರ ವೇಳೆಗೆ 9.7 ಬಿಲಿಯನ್ ಆಗಲಿದೆ ಎಂದು ವರದಿ ಅಂದಾಜಿಸಿದೆ.

ಜಗತ್ತಿನಲ್ಲಿ ಈ ವರ್ಷ  ಅತ್ಯಂತ ಹೆಚ್ಚು ಜನಸಂಖ್ಯೆಯಿರುವ ಪ್ರಾಂತ್ಯ ಪೂರ್ವ ಮತ್ತು ವಾಯುವ್ಯ ಏಷ್ಯಾ ಆಗಿದ್ದು ಈ ಪ್ರದೇಶದ ಜನಸಂಖ್ಯೆ2.3 ಬಿಲಿಯನ್  ಆಗಿದ್ದು ಇದು ಜಗತ್ತಿನ ಒಟ್ಟು ಜನಸಂಕ್ಯೆಯ ಶೇ 29ರಷ್ಟಾಗಿದೆ. ಮಧ್ಯ ಮತ್ತು ದಕ್ಷಣ ಏಷ್ಯಾದ ಜನಸಂಖ್ಯೆ 2.1 ಬಿಲಿಯ್ ಆಗಿದ್ದು ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 26ರಷ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News