ಅಬು ಸಲೇಂನನ್ನು 25 ವರ್ಷಗಳ ನಂತರ ಜೈಲಿನಲ್ಲಿ ಇಡದಿರಲು ಕೇಂದ್ರ ಬದ್ಧವಾಗಿದೆ: ಸುಪ್ರೀಂ ಕೋರ್ಟ್

Update: 2022-07-11 09:27 GMT
Photo:AFP

ಹೊಸದಿಲ್ಲಿ: ಗ್ಯಾಂಗ್ ಸ್ಟರ್  ಅಬು ಸಲೇಂನನ್ನು 25 ವರ್ಷಗಳ ನಂತರ ಜೈಲಿನಲ್ಲಿ ಇಡದಿರುವ ಮೂಲಕ ಪೋರ್ಚುಗಲ್‌ ನೊಂದಿಗೆ ತನ್ನ ಒಪ್ಪಂದವನ್ನು ಗೌರವಿಸಲು ಭಾರತ ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಲೇಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ  ವಿಚಾರಣೆ ನಡೆಸಿತು.

ಸೆಪ್ಟೆಂಬರ್ 2017 ರಲ್ಲಿ ಮುಂಬೈನಲ್ಲಿ ಈಗ ರದ್ದುಗೊಂಡಿರುವ ಭಯೋತ್ಪಾದಕ ಹಾಗೂ ವಿಚ್ಛಿದ್ರಕಾರಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ವಿಶೇಷ ನ್ಯಾಯಾಲಯವು 250 ಕ್ಕೂ ಹೆಚ್ಚು ಜನರನ್ನು ಕೊಂದ ಸ್ಫೋಟಗಳಲ್ಲಿ ಸಲೇಂ ಪಾತ್ರಕ್ಕಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. 1995ರಲ್ಲಿ ಮುಂಬೈ ಬಿಲ್ಡರ್‌ನ ಕೊಲೆ ಪ್ರಕರಣದಲ್ಲಿ  ಶಾಮೀಲಾದ ಆರೋಪದಲ್ಲೂ ಜೀವಾವಧಿ ಶಿಕ್ಷೆಯನ್ನು ಸಲೇಂ ಅನುಭವಿಸುತ್ತಿದ್ದಾನೆ.

ನವೆಂಬರ್ 2005 ರಲ್ಲಿ ಸಲೇಂನನ್ನು ಪೋರ್ಚುಗಲ್‌ನಿಂದ ಹಸ್ತಾಂತರಿಸಲಾಯಿತು. ಸಲೇಂನನ್ನು ಪ್ರಸ್ತುತ ಮುಂಬೈ ಜೈಲಿನಲ್ಲಿ ಇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News