ಜುಲೈ 21 ಕ್ಕೆ ತನಿಖೆಗೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಮತ್ತೆ ಇಡಿ ನೋಟಿಸ್‌

Update: 2022-07-11 12:49 GMT

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜುಲೈ 21 ರಂದು ತನಿಖೆಗೆ ಸೇರುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಹೊಸದಾಗಿ ನೋಟಿಸ್ ನೀಡಿದೆ.

ಜೂನ್ 22 ರಂದು, ತನ್ನ ಅನಾರೋಗ್ಯದ ಬಗ್ಗೆ ಇಡಿಗೆ ಪತ್ರ ಬರೆದಿದ್ದ ಸೋನಿಯಾ ಗಾಂಧಿ, ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದರು, ಅದನ್ನು ತನಿಖಾ ಸಂಸ್ಥೆ ಒಪ್ಪಿಕೊಂಡಿತ್ತು.

ಕೋವಿಡ್‌ನಿಂದ ಬಳಲುತ್ತಿದ್ದ ಸೋನಿಯಾ ಗಾಂಧಿ ದಿಲ್ಲಿಯ  ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂನ್ 12 ರಂದು ಅವರ ಮೂಗಿನಿಂದ ರಕ್ತಸ್ರಾವವಾದ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜೂನ್ 23 ಕ್ಕೆ ಸೋನಿಯಾ ಗಾಂಧಿಗೆ ಇಡಿ ಎರಡನೇ ಸಮನ್ಸ್ ನೀಡಲಾಗಿತ್ತು, COVID-19 ಮತ್ತು ಶ್ವಾಸಕೋಶದ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾದ ನಂತರ ಮನೆಯಲ್ಲಿ ಕಟ್ಟುನಿಟ್ಟಾಗಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದರು, ಈ ಹಿನ್ನೆಲೆಯಲ್ಲಿ ಜೂ. 23 ಕ್ಕೂ ತನಿಖೆಯಲ್ಲಿ ಸೇರಲು ಸೋನಿಯಾ ಅವರಿಗೆ ಸಾಧ್ಯವಾಗಿರಲಿಲ್ಲ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News