ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ನ್ಯಾಯಾಂಗ ಬಂಧನ ವಿಸ್ತರಣೆ‌

Update: 2022-07-11 15:25 GMT

ಹೊಸದಿಲ್ಲಿ,ಜು.11: ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಸೋಮವಾರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಸಚಿವ ಸತ್ಯೇಂದ್ರ ಜೈನ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜು.20ರವರೆಗೆ ವಿಸ್ತರಿಸಿದೆ. ಇದೇ ವೇಳೆ ಪ್ರಕರಣದಲ್ಲಿಯ ಆರೋಪಿ ವೈಭವ್ ಜೈನ್ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,‌ ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಪ್ರಕರಣದ ಮೂರನೇ ಆರೋಪಿ ಅಂಕುಶ ಜೈನ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದ್ರ ಜೈನರಿಗೆ ನೆರವಾದವರಲ್ಲಿ ವೈಭವ ಮತ್ತು ಅಂಕುಶ ಸೇರಿದ್ದಾರೆ ಎಂದು ಈ.ಡಿ.ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಐವರ ಮೇಲೆ ಅದು ನಿಗಾಯಿರಿಸಿದೆ.ಅಕ್ರಮ ಸಂಪತ್ತು ಶೇಖರಣೆ ಆರೋಪದಲ್ಲಿ ಸಿಬಿಐ ಸತ್ಯೇಂದ್ರ ಜೈನರ ವಿರುದ್ಧ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ.ಡಿ.2022,ಮೇ 30ರಂದು ಸತ್ಯೇಂದ್ರ ಜೈನರನ್ನು ಬಂಧಿಸಿತ್ತು. ಜೂ.6ರಂದು ದಿಲ್ಲಿ ಮತ್ತು ಎನ್ಸಿಆರ್ನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದ ಈ.ಡಿ.ಅವರ ಸಹಾಯಕರಿಂದ 2.85 ಕೋ.ರೂ.ನಗದು,1.80 ಕೆ.ಜಿ.ತೂಕದ 133 ಚಿನ್ನದ ನಾಣ್ಯಗಳು ಮತ್ತು ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News