'ಹಾಜಿ ಕ್ರೇನ್ ಮಂಗಳೂರು' ತಂಡವನ್ನು ಸನ್ಮಾನಿಸಿದ ಸ್ಥಳೀಯ ಬಳಕೆದಾರರ ವೇದಿಕೆ

Update: 2022-07-12 17:16 GMT

ಮಂಗಳೂರು: ಕಳೆದ 12 ವರ್ಷಗಳಿಂದ "ಹಾಜಿ ಕ್ರೇನ್ ಮಂಗಳೂರು" ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿರುವ  ಮೊಯ್ದಿನ್‌ ಆದಿಲ್‌ ಹಾಗು ಅಬ್ದುಲ್‌ ಹಮೀದ್‌ ಅವರ ತಂಡ ಇತ್ತೀಚೆಗೆ ಉಡುಪಿಯ ಪರ್ಕಳದಲ್ಲಿ ನಡೆದ ಅಪಘಾತದಲ್ಲಿ ಬಿದ್ದಿದ್ದ 35 ಟನ್ ತೂಕದ ಲಾರಿಯನ್ನು ಮೇಲಕ್ಕೆತ್ತಿದ ಬಳಿಕ ಸ್ಥಳೀಯ ಬಳಕೆದಾರರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಹಾಜಿ ಕ್ರೇನ್ ಮಂಗಳೂರು ತಂಡದ ಮೊಯ್ದಿನ್‌ ಆದಿಲ್‌, ಅಬ್ದುಲ್‌ ಹಮೀದ್‌, ಮೊಹಮ್ಮದ್‌ ಹನೀಫ್‌, ಅಯ್ಯೂಬ್‌, ಬಶೀರ್‌, ಮೊಹಮ್ಮದ್‌ ರಶೀದ್‌, ಇಮ್ರಾನ್‌, ನೂರ್‌ ಮೊಹಮ್ಮದ್‌, ಫೈಝಲ್‌, ಹಸೈನಾರ್‌ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಕಷ್ಟಕರ ಪರಿಸ್ಥಿತಿಯಲ್ಲೂ ಭಾರವಾದ ವಸ್ತುಗಳನ್ನು ಎತ್ತುವಂತಹ ಚಾತುರ್ಯ, ಚಾಕಚಕ್ಯತೆಯನ್ನು ಹೊಂದಿರುವ ಹಾಜಿ ಕ್ರೇನ್ ತಂಡ 12 ವರ್ಷಗಳ ಹಿಂದೆ ಮಂಗಳೂರಿನ ವಿಮಾನ ಅಪಘಾತದ ಸಂದರ್ಭ ಭಾರವಾದ ಅವಶೇಷಗಳನ್ನು ಮೇಲೆತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಇತರ ರಾಜ್ಯಗಳಲ್ಲಿ ನಡೆದ ಅಪಘಾತಗಳು ಮತ್ತು ಭಾರೀ ಗಾತ್ರದ ವಸ್ತುಗಳನ್ನು ಆಳದಿಂದ ಮೇಲಕ್ಕೆತ್ತಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಪರ್ಕಳದಲ್ಲಿ ನಡೆದ ಅಪಘಾತದಲ್ಲಿ ಬಹುಚಕ್ರದ 35 ಟನ್ ತೂಕದ ಲಾರಿಯನ್ನು ಮೇಲಕ್ಕೆತ್ತಿದ ಸಾಧನೆಯನ್ನೂ ಗುರುತಿಸಿ "ಹಾಜಿ ಕ್ರೇನ್ ಮಂಗಳೂರು" ತಂಡವನ್ನು ಸನ್ಮಾನಿಸಲಾಯಿತು ಎಂದು ಸ್ಥಳೀಯ ಬಳಕೆದಾರರ ವೇದಿಕೆ  ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News