ಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ನಿಧನ

Update: 2022-07-15 02:40 GMT
Photo: .businessinsider.in

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್ (73) ಗುರುವಾರ ಮೃತಪಟ್ಟಿದ್ದಾರೆ.

"ಇವಾನಾ ನ್ಯೂಯಾರ್ಕ್ ಸಿಟಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿಯನ್ನು ಅವರ ಪ್ರೀತಿಪಾತ್ರರಿಗೆ ಹೇಳಲು ನನಗೆ ತೀವ್ರ ಬೇಸರವಾಗುತ್ತಿದೆ" ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರುತ್ ಸೋಶಿಯಲ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

1977ರಲ್ಲಿ ವಿವಾಹವಾಗಿದ್ದ ಇವಾನಾ ಹಾಗೂ ಟ್ರಂಪ್ 1992ರಲ್ಲಿ ವಿಚ್ಛೇದನ ಪಡೆದಿದ್ದರು. ಇವರಿಗೆ ಡೊನಾಲ್ಡ್ ಜ್ಯೂನಿಯರ್, ಇವಾಂಕಾ ಮತ್ತು ಎರಿಕ್ ಎಂಬ ಮೂವರು ಮಕ್ಕಳಿದ್ದಾರೆ.

"ಇವಾನಾ ಟ್ರಂಪ್ ಸಂತ್ರಸ್ತೆ. ಕಮ್ಯುನಿಸಂ ತ್ಯಜಿಸಿ ನಮ್ಮ ದೇಶಕ್ಕೆ ಬಂದಿದ್ದರು. ಆಕೆ ತನ್ನ ಮಕ್ಕಳಿಗೆ ಕೆಚ್ಚು, ಕಾಠಿಣ್ಯ, ಪ್ರೀತಿ ಮತ್ತು ಬದ್ಧತೆಯನ್ನು ಕಲಿಸಿದ್ದಳು" ಎಂದು ಟ್ರಂಪ್ ಕುಟುಂಬ ಹೇಳಿಕೆ ನೀಡಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ಹಿಂದಿನ ಝೆಕೋಸ್ಲಾವಾಕಿಯಾದಲ್ಲಿ ಕಮ್ಯುನಿಸ್ಟ್ ಆಡಳಿತದಲ್ಲಿ ಆಕೆ ಬೆಳೆದಿದ್ದರು. ಟ್ರಂಪ್ ಅವರ ಕುಟುಂಬ ಅಥವಾ ಮಾಜಿ ಅಧ್ಯಕ್ಷರ ಪೋಸ್ಟ್ ನಲ್ಲಾಗಲೀ, ಇವಾನಾ ಸಾವಿನ ಕಾರಣದ ಬಗ್ಗೆ ಉಲ್ಲೇಖ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News