7 ದಿನಗಳಲ್ಲಿ ಶ್ರೀಲಂಕಾಕ್ಕೆ ಹೊಸ ಅಧ್ಯಕ್ಷ: ಸ್ಪೀಕರ್

Update: 2022-07-15 04:35 GMT
Photo: twitter

ಕೊಲಂಬೊ: ಶ್ರೀಲಂಕಾ ಏಳು ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ಹೊಂದಲಿದೆ ಎಂದು ಸಂಸದೀಯ ಸ್ಪೀಕರ್ ಶುಕ್ರವಾರ ಹೇಳಿದರು.

 ಈ ವಾರದ ಆರಂಭದಲ್ಲಿ ದೇಶದಿಂದ ಪಲಾಯನ ಮಾಡಿರುವ ಅಧ್ಯಕ್ಷ ಗೊತಬಯ ರಾಜಪಕ್ಸ ಅವರ ರಾಜೀನಾಮೆಯನ್ನು  ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಹೇಳಿದ್ದಾರೆ.

ಗುರುವಾರದಿಂದ ಜಾರಿಗೆ ಬರುವಂತೆ "ಗೊತಬಯ ಅವರು ಕಾನೂನುಬದ್ಧವಾಗಿ ರಾಜೀನಾಮೆ ನೀಡಿದ್ದಾರೆ" ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ದನಾ ಅವರು ಸುದ್ದಿಗಾರರಿಗೆ ತಿಳಿಸಿದರು.

 ರಾಜಪಕ್ಸ ಅವರು ತಾನು  ರಾಜೀನಾಮೆ ನೀಡುವುದಾಗಿ ಸಿಂಗಾಪುರದಿಂದ ಸ್ಪೀಕರ್‌ಗೆ ಸೂಚನೆ ನೀಡಿದರು.

ದೇಶದ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಪ್ರೇರಿತ ಸರಕಾರಿ ವಿರೋಧಿ ಪ್ರತಿಭಟನೆಗಳಿಂದ ತಪ್ಪಿಸಿಕೊಳ್ಳಲು ಸಿಂಗಾಪುರಕ್ಕೆ ಓಡಿಹೋದ ನಂತರ ಅಧ್ಯಕ್ಷ ಗೊತಬಯ  ರಾಜೀನಾಮೆ ನೀಡಿದ್ದಾರೆ ಎಂದು ಖಚಿತಪಡಿಸುವ ಔಪಚಾರಿಕ ಪ್ರಕಟನೆಗಾಗಿ ಶ್ರೀಲಂಕಾ ಪ್ರಜೆಗಳು ಕಾಯುತ್ತಿದ್ದರು.

ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ಆಗಮಿಸಿದ ನಂತರ ಗೊತಬಯ ರಾಜಪಕ್ಸೆ ಗುರುವಾರ ತಡರಾತ್ರಿ ರಾಜೀನಾಮೆ ಸಲ್ಲಿಸಿದ್ದರು. ವಾರಾಂತ್ಯದಲ್ಲಿ ಪ್ರತಿಭಟನಾಕಾರರು ಅವರ ಅರಮನೆಯನ್ನು ಆಕ್ರಮಿಸಿದ ನಂತರ ಅವರು ಮಾಲ್ದೀವ್ಸ್ ಗೆ ಪಲಾಯನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News