×
Ad

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ನಮ್ಮ ಬೆಂಬಲ: ಒ.ಪಿ. ರಾಜ್‌ಭರ್

Update: 2022-07-15 10:34 IST
Photo:twitter

ಲಕ್ನೊ: ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮಿತ್ರ ಪಕ್ಷ ಸುಹೇಲ್ ದೇವ್ ಭಾರತೀಯ ಸಮಾಜ್ ಪಾರ್ಟಿ (ಎಸ್ ಬಿ ಎಸ್ ಪಿ)ನಾಯಕ  ಓಂ ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ ಎಂದು NDTV ವರದಿ  ಮಾಡಿದೆ.

ರಾಜ್‌ಭರ್ ಅವರು ಆಡಳಿತ ಪಕ್ಷದ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವ ಮೂಲಕ ಪ್ರತಿಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ  ಯಶವಂತ್ ಸಿನ್ಹಾ ಅವರ ಅಭಿಯಾನಕ್ಕೆ  ಶುಕ್ರವಾರ ಮತ್ತೊಂದು ಹಿನ್ನಡೆ ಎದುರಾಯಿತು.

ರಾಜ್ ಭರ್ ಅವರು ಮುರ್ಮುವಿಗೆ ಬೆಂಬಲ ನೀಡಿದ ಮತ್ತೊಂದು ವಿಪಕ್ಷ ನಾಯಕನಾಗಿದ್ದಾರೆ.

ಈ ವಾರದ ಆರಂಭದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ  ಕಾಂಗ್ರೆಸ್ ಮಿತ್ರಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ, ಜಾರ್ಖಂಡ್ ಮುಖ್ಯಮಂತ್ರಿ  ಹೇಮಂತ್ ಸೊರೆನ್  ಕೂಡ ಮುರ್ಮುವಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News