ಉತ್ತರಪ್ರದೇಶದಲ್ಲಿ ಹಿರಿಯ ಸರಕಾರಿ ಅಧಿಕಾರಿ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ: ಪೊಲೀಸರು
ದಾದ್ರಿ: ಉತ್ತರ ಪ್ರದೇಶದ ದಾದ್ರಿಯಲ್ಲಿರುವ ಎನ್‌ಟಿಪಿಸಿ ಲಿಮಿಟೆಡ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಕಚೇರಿ ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಡಿಜಿಎಂ ಸತೀಶ್ ಕುಮಾರ್ ಸಿಂಗ್ ಅವರು ಎನ್‌ಟಿಪಿಸಿ ಕ್ಯಾಂಪಸ್‌ನಲ್ಲಿರುವ ಕೂಲಿಂಗ್ ಪ್ಲಾಂಟ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ನಿನ್ನೆ ರಾತ್ರಿ ಅವರ ಮೃತದೇಹವನ್ನು ಕೂಲಿಂಗ್ ಪ್ಲಾಂಟ್‌ನಿಂದ ಹೊರತೆಗೆಯಲಾಗಿದೆ.
ಸತೀಶ್ ಕುಮಾರ್ ಸಿಂಗ್ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಹಾಗೂ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದು ಅವರ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಜಿಎಂ ವಾರಣಾಸಿಗೆ ಸೇರಿದವರಾಗಿದ್ದು, ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸತೀಶ್ ಕುಮಾರ್ ಸಿಂಗ್ ಶುಕ್ರವಾರ ಬೆಳಗ್ಗೆ ಕೆಲಸ ನಿಮಿತ್ತ ಮನೆಯಿಂದ ತೆರಳಿದ್ದರು, ಆದರೆ ಕಚೇರಿಗೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.