ಅಸ್ಸಾಂ, ಅರುಣಾಚಲ ಪ್ರದೇಶ ದಶಕಗಳಷ್ಟು ಹಳೆಯ ಗಡಿ ವಿವಾದವನ್ನು ಪರಿಹರಿಸಲು ಒಪ್ಪಿಗೆ

Update: 2022-07-16 07:39 GMT
PTI Photo

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ  ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಶುಕ್ರವಾರ ಎರಡು ರಾಜ್ಯಗಳ ನಡುವಿನ ದಶಕಗಳ ಗಡಿ ವಿವಾದವನ್ನು ಕೊನೆಗೊಳಿಸುವ ಕುರಿತ  ಒಪ್ಪಂದಕ್ಕೆ ಸಹಿ ಹಾಕಿದರು.

 ಉಭಯ ನಾಯಕರು ಗ್ರಾಮಗಳ ಸಂಖ್ಯೆಯನ್ನು 123 ರ ಬದಲಿಗೆ 86 ಕ್ಕೆ ಸೀಮಿತಗೊಳಿಸಲು ಒಪ್ಪಿಕೊಂಡರು.

"ವಿವಾದಿತ ಗ್ರಾಮಗಳನ್ನು 123 ರ ಬದಲಿಗೆ 86 ಕ್ಕೆ ನಿರ್ಬಂಧಿಸಲು ನಾವು ನಿರ್ಧರಿಸಿದ್ದೇವೆ. ನಮ್ಮ ಪ್ರಸ್ತುತ ಗಡಿಯನ್ನು ಆಧರಿಸಿ ಸೆಪ್ಟೆಂಬರ್ 15, 2022 ರೊಳಗೆ ಉಳಿದವುಗಳನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತೇವೆ" ಎಂದು ಅರುಣಾಚಲ ಪ್ರದೇಶದ ನಮಸೈಯಲ್ಲಿ ನಡೆದ ಸಭೆಯ ನಂತರ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ ಖಂಡು ಅವರು ಟ್ವೀಟ್ ಮೂಲಕ ಒಪ್ಪಂದದ ಬಗ್ಗೆ ಘೋಷಿಸಿದರು.

ಇದಕ್ಕೂ ಮೊದಲು ಉಭಯ ನಾಯಕರು ಜನವರಿ 24 ರಂದು ಭೇಟಿಯಾಗಿದ್ದರು ಹಾಗೂ ಎಪ್ರಿಲ್ 20 ರಂದು ಮತ್ತೆ ಅಸ್ಸಾಂ ಹಾಗೂ  ಅರುಣಾಚಲ ಪ್ರದೇಶದ ನಡುವಿನ ಎಲ್ಲಾ ಗಡಿ ಸಮಸ್ಯೆಗಳನ್ನು 2007 ರಲ್ಲಿ ಸ್ಥಳೀಯ ಆಯೋಗದ ಮುಂದೆ ಪ್ರಸ್ತಾಪಿಸಿದಂತೆ ಸೀಮಿತಗೊಳಿಸಲಾಗುವುದು ಎಂದು ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News