×
Ad

ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿಯವರನ್ನು ಸಿಲುಕಿಸುವ ಸಂಚಿಗೆ ಸೋನಿಯಾ ಗಾಂಧಿ ಪ್ರೇರಣೆ: ಬಿಜೆಪಿ ಆರೋಪ

Update: 2022-07-16 15:23 IST
ಸಂಬಿತ್ ಪಾತ್ರಾ,Photo:youtube

ಹೊಸದಿಲ್ಲಿ: 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಸಿಲುಕಿಸುವ ಸಂಚಿನ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ ಪಕ್ಷದ ವಕ್ತಾರ ಸಂಬಿತ್ ಪಾತ್ರಾ , ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರರಾಗಿದ್ದ ಹಾಗೂ ಕಾಂಗ್ರೆಸ್ ನ  ಪ್ರಮುಖ ನಾಯಕ ದಿವಂಗತ ಅಹ್ಮದ್ ಪಟೇಲ್  ಕೇವಲ ಮಾಧ್ಯಮವಾಗಿದ್ದರು.  ಅವರ ಮೂಲಕ ಸೋನಿಯಾ ಗಾಂಧಿ ಅವರು  ರಾಜ್ಯದಲ್ಲಿನ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಹಾಗೂ  ಪ್ರಧಾನಿ ಮೋದಿಯವರ ರಾಜಕೀಯ ವೃತ್ತಿವನ್ನು ಹಾನಿ ಮಾಡುವ ಕೆಲಸ ಮಾಡಿದ್ದಾರೆ ಎಂದರು.

ಈ ಬಗ್ಗೆ ಸೋನಿಯಾ ಗಾಂಧಿ ಪತ್ರಿಕಾಗೋಷ್ಠಿ ನಡೆಸಬೇಕು ಎಂದು ಪಾತ್ರಾ ಆಗ್ರಹಿಸಿದರು.

"ಸೋನಿಯಾ ಗಾಂಧಿ ಅವರು ಪತ್ರಿಕಾಗೋಷ್ಠಿ ನಡೆಸಬೇಕೆಂದು ನಾವು ಬಯಸುತ್ತೇವೆ ಹಾಗೂ  ಅವರು ಪಿಎಂ ಮೋದಿಯ ವಿರುದ್ಧ ಏಕೆ ಪಿತೂರಿ ನಡೆಸಿದ್ದಾರೆ ಎಂದು ರಾಷ್ಟ್ರವನ್ನು ಉದ್ದೇಶಿಸಿ ಹೇಳಬೇಕು. ಈ ಪತ್ರಿಕಾಗೋಷ್ಠಿಯು ಪಟೇಲ್ ಅವರ ಮೇಲೆ ಆಕ್ರಮಣವಲ್ಲ, ಪಟೇಲ್ ಹೇಳಿದಂತೆ ಸೋನಿಯಾ ವರ್ತಿಸುತ್ತಿದ್ದರು'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News