ರಾಜಪಕ್ಸ ಪಲಾಯನ ನಂತರ ಅನಿವಾಸಿ ಶ್ರೀಲಂಕನ್ನರಿಂದ ಡಾಲರ್ ಚ್ಯಾಲೆಂಜ್ ಅಭಿಯಾನ

Update: 2022-07-16 12:50 GMT

ಕೊಲಂಬೋ: ಜಗತ್ತಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಶ್ರೀಲಂಕಾದ ನಾಗರಿಕರು ಇದೀಗ ತಮ್ಮ ತವರು ದೇಶಕ್ಕೆ ಡಾಲರ್‍ಗಳನ್ನು ಕಳುಹಿಸಲು ಆರಂಭಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ದೇಶದ ಜನರ ಒತ್ತಡ ಹಾಗೂ ಪ್ರತಿಭಟನೆಗಳಿಗೆ ಮಣಿದು ಹಿಂದಿನ ಅಧ್ಯಕ್ಷ ಗೋಟಬಯ ರಾಜಪಕ್ಷ ಅವರು ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನಗೈದ ನಂತರದ ಬೆಳವಣಿಗೆ ಇದಾಗಿದೆ.

ಟ್ವಿಟ್ಟರ್‍ನಲ್ಲಿ #ಶ್ರೀಲಂಕಾಡಾಲರ್‌ಚಾಲೆಂಜ್ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್ ಆಗಿದೆ. ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ವಿದೇಶಗಳಲ್ಲಿರುವ ಶ್ರೀಲಂಕನ್ನರಿಗೆ ಡಾಲರ್‍ಗಳನ್ನು  ಕಾನೂನುಬದ್ಧವಾಗಿ ಅಧಿಕೃತ ಬ್ಯಾಂಕ್‍ಗಳ ಮೂಲಕವೇ ಕಳುಹಿಸುವಂತೆ ಸೂಚಿಸಿದೆ ಎನ್ನಲಾಗಿದೆ.

ತಾವು ಹಣ ನೀಡಿದ್ದಕ್ಕೆ ಪುರಾವೆಯಾಗಿ ಡೆಪಾಸಿಟ್ ಸ್ಲಿಪ್‍ಗಳನ್ನು ಹಲವು ಸಾಮಾಜಿಕ ಜಾಲತಾಣಿಗರು ಕಳೆದ 24 ಗಂಟೆಯಿಂದ ಪೋಸ್ಟ್ ಮಾಡುತ್ತಿದ್ದಾರೆ ಹಾಗೂ ಇತರರಿಗೂ ಹಾಗೆಯೇ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

"ಭರವಸೆ ನೀಡಿದಂತೆ ನಮ್ಮ ತಾಯ್ನಾಡಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ" ಎಂದು ಒಬ್ಬ ಟ್ವಿಟ್ಟರಿಗ ಬರೆದಿದ್ದರೆ ಇನ್ನೊಬ್ಬರು "ನಾವು ಜೊತೆಯಾಗಿ ನಮ್ಮ ದೇಶವನ್ನು ಕಟ್ಟೋಣ" ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News