ಚೈಲ್ಡ್‌ಲೈನ್‌ನಿಂದ ಬಾಲಕಿ ನಾಪತ್ತೆ

Update: 2022-07-26 05:27 GMT

ಮಂಗಳೂರು : ನಗರದ ಕದ್ರಿ ಶಿವಭಾಗ್‌ನಲ್ಲಿರುವ ಚೈಲ್ಡ್‌ಲೈನ್‌ನಿಂದ ಬಾಲಕಿಯೊಬ್ಬಳು ನಾಪತ್ತೆಯಾದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೊಸದಿಲ್ಲಿ ಮೂಲದ ಇಂಚರ (15) ನಾಪತ್ತೆಯಾದ ಬಾಲಕಿ. ೧೩ ದಿನಗಳ ಹಿಂದೆ ಈಕೆ ತನ್ನ ಅಣ್ಣನನ್ನು ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದಳು. ನಗರದ ರೈಲ್ವೇ ಸ್ಟೇಷನ್‌ನಲ್ಲಿ ತಿರುಗಾಡುತ್ತಿದ್ದ ಈಕೆಯನ್ನು ರೈಲ್ವೆ ಪೊಲೀಸರು ವಿಚಾರಣೆ ನಡೆಸಿದಾಗ ಅಸ್ಪಷ್ಟವಾಗಿ ಮಾಹಿತಿ ಸಿಕ್ಕಿತ್ತು. ಬಳಿಕ ಆಕೆಯನ್ನು ಚೈಲ್ಡ್‌ಲೈನ್‌ನ ವಶಕ್ಕೆ ಒಪ್ಪಿಸಲಾಗಿತ್ತು.

ಶನಿವಾರ ಮಧ್ಯಾಹ್ನ ಚೈಲ್ಡ್‌ಲೈನ್ ಹಿಂಭಾಗಕ್ಕೆ ಬಟ್ಟೆ ತರಲೆಂದು ಹೋದವಳು ಅಲ್ಲಿಂದ ಕಾಂಪೌಂಡ್  ಹಾರಿ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News