ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ವಾಯುದಾಳಿ‌

Update: 2022-07-16 16:49 GMT
Image: Pexel

ಜೆರುಸಲೇಂ, ಜು.16: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಕ್ಷಿಪಣಿ ಹಾಗೂ ರಾಕೆಟ್ಗಳನ್ನು ಬಳಸಿ ಹಲವು ವಾಯದಾಳಿ ನಡೆಸಿದೆ. ಆದರೆ ಇದರಿಂದ ಯಾವುದೇ ಸಾವುನೋವಿನ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಧ್ಯಪ್ರಾಚ್ಯ ದೇಶಗಳಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಇಸ್ರೇಲ್ನ ವಾಯುದಾಳಿ ನಡೆದಿದೆ. ಕೇಂದ್ರ ಗಾಝಾದಲ್ಲಿ ಹಮಾಸ್ಗೆ ಸೇರಿದ ರಾಕೆಟ್ ಉತ್ಪಾದನಾ ಕಾರ್ಖಾನೆಗೆ ಕ್ಷಿಪಣಿ ಬಡಿದಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

 
 ಸುಮಾರು 12 ಕ್ಷಿಪಣಿ ಈ ಪ್ರದೇಶಕ್ಕೆ ಬಂದು ಅಪ್ಪಳಿಸಿದ್ದು ಭೀಕರ ಸದ್ದಿಗೆ ಜನರು ನಿದ್ದೆಯಿಂದ ಎಚ್ಚರಗೊಂಡರು. ಯಾವುದೇ ಸಾವುನೋವಿನ ವರದಿಯಾಗದಿದ್ದರೂ ಹಲವು ಕಟ್ಟಡಗಳಿಗೆ ಹಾನಿಯಾಗಿದೆ . ಈ ಪ್ರದೇಶದ ಸುತ್ತಮುತ್ತಲಿನ ಪ್ರದೇಶ ಕೃಷಿಭೂಮಿಯಾಗಿದೆ ಎಂದು ಅಲ್ಜಝೀರಾ ವರದಿ ಮಾಡಿದೆ. ಇಸ್ರೇಲ್ಗೆ ಬೈಡನ್ ಭೇಟಿ ನೀಡಿದ ತಕ್ಷಣ ಗಾಝಾ ಪಟ್ಟಿ ಮೇಲೆ ಇಸ್ರೇಲ್ ದಾಳಿ ನಡೆಸಿರುವುದು ಕಾಕತಾಳೀಯ ಘಟನೆಯಲ್ಲ. ಇಸ್ರೇಲ್ನ ಅತಿಕ್ರಮಣಕ್ಕೆ ಅಮೆರಿಕದ ನೆರವು ಮತ್ತು ಉತ್ತೇಜನದ ಪ್ರಮಾಣವನ್ನು ಈ ದಾಳಿಯು ಪ್ರತಿಫಲಿಸಿದೆ. ಇಸ್ರೇಲ್ನ ಆಕ್ರಮಣಶೀಲತೆಯ ಮುಂದುವರಿಕೆಯನ್ನು ಇದು ಸೂಚಿಸುತ್ತದೆ ಎಂದು ಹಮಾಸ್ ವಕ್ತಾರ ಫಾಜ್ವಿ ಬರ್ಹೂಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News