×
Ad

ಸಿಂಗಾಪುರ ಪ್ರವಾಸಕ್ಕೆ ಅನುಮತಿ ವಿಳಂಬ: ಪ್ರಧಾನಿಗೆ ಅರವಿಂದ ಕೇಜ್ರಿವಾಲ್ ಪತ್ರ

Update: 2022-07-17 12:46 IST

 ಹೊಸದಿಲ್ಲಿ: ‘ವಿಶ್ವ ನಗರಗಳ ಶೃಂಗಸಭೆ'ಯ ಲ್ಲಿ ಪಾಲ್ಗೊಳ್ಳಲು ಸಿಂಗಾಪುರ ಪ್ರವಾಸಕ್ಕೆ ಅನುಮತಿ ವಿಳಂಬವಾಗಿದೆ ಎಂದು ಆರೋಪಿಸಿರುವ  ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅನುಮತಿ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

  ಇಂತಹ ಮಹತ್ವದ ವೇದಿಕೆಗೆ ಮುಖ್ಯಮಂತ್ರಿಯೊಬ್ಬರು ಭೇಟಿ ನೀಡದಂತೆ ತಡೆಯುವುದು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ... ಈ ಆಹ್ವಾನವು ದೇಶಕ್ಕೆ ಹೆಮ್ಮೆ ಹಾಗೂ  ಗೌರವದ ಸಂಗತಿಯಾಗಿದೆ ಎಂದು ಕೇಜ್ರಿವಾಲ್ ಪತ್ರದಲ್ಲಿ ಬರದಿದ್ದಾರೆ.

 ಜೂನ್‌ನಲ್ಲಿ ಸಿಂಗಾಪುರದ ಹೈ ಕಮಿಷನರ್ ಸೈಮನ್ ವಾಂಗ್ ಅವರು ಕೇಜ್ರಿವಾಲ್ ಅವರನ್ನು ಭೇಟಿಗೆ ಆಹ್ವಾನಿಸಿದ್ದರು ಹಾಗೂ ಕೇಜ್ರಿವಾಲ್ ಆ  ಆಹ್ವಾನವನ್ನು ಸ್ವೀಕರಿಸಿದರು. ಆದರೆ ಅವರಿಗೆ ಸಿಂಗಾಪುರ  ಭೇಟಿಗೆ ಇನ್ನೂ ಅನುಮತಿ ಸಿಕ್ಕಿಲ್ಲ.

"ಸಿಂಗಾಪುರ ಸರಕಾರವು ವಿಶ್ವ ದರ್ಜೆಯ ಸಮ್ಮೇಳನದಲ್ಲಿ ದಿಲ್ಲಿ ಮಾದರಿಯನ್ನು ಪ್ರಸ್ತುತಪಡಿಸಲು ನಮ್ಮನ್ನು ಆಹ್ವಾನಿಸಿದೆ. ದಿಲ್ಲಿ ಮಾದರಿಯನ್ನು ಪ್ರಪಂಚದಾದ್ಯಂತದ ಅನೇಕ ದೊಡ್ಡ ನಾಯಕರ ಮುಂದೆ ಪ್ರಸ್ತುತಪಡಿಸಲಾಗುವುದು. ಇಡೀ ಜಗತ್ತು ದಿಲ್ಲಿ ಮಾದರಿಯ ಬಗ್ಗೆ ತಿಳಿದುಕೊಳ್ಳಲು ಬಯಸುತ್ತದೆ" ಎಂದು ಕೇಜ್ರಿವಾಲ್ ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News