ಭಟ್ಕಳ; ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಎಂ.ಆರ್. ಮಾನ್ವಿಗೆ ವೆಲ್ಫೇರ್ ಪಾರ್ಟಿಯಿಂದ ಸನ್ಮಾನ

Update: 2022-07-17 11:38 GMT

ಭಟ್ಕಳ: ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ  ಆಯ್ಕೆಗೊಂಡ ವಾರ್ತಾಭಾರತಿ ಭಟ್ಕಳ ತಾಲೂಕು ವರದಿಗಾರ ಎಂ.ಆರ್.ಮಾನ್ವಿ ಯವರಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉ.ಕ ಜಿಲ್ಲಾ ಸಮಿತಿ ಪರವಾಗಿ ಡಬ್ಲೂಪಿಐ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್  ವೆಲ್ಫೇರ್ ಪಾರ್ಟಿಯ ಕಾರ್ಯಾಲಯದಲ್ಲಿ ರವಿವಾರ ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ತೊಡಗಿಸಿಕೊಂಡಿರುವ ಮಾನ್ವಿ ಯವರು ವಿವಿಧ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದಾರೆ. ಸಮಾಜದಲ್ಲಿ ಸೌಹಾರ್ದತೆ ಯನ್ನುಂಟು ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು ತಮ್ಮ ಮಾನವೀಯ ವರದಿಗಳ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತ ಬಂದಿದ್ದಾರೆ. ಭಟ್ಕಳ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಇವರು ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹಾರೈಸಿದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾನ್ವಿ, ರಾಜಕೀಯ ಪಕ್ಷಗಳು ತಮ್ಮ ತಮ್ಮ ಸಿದ್ಧಾಂತಗಳ ಜೊತೆಗೆ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಳ್ಳಬೇಕು, ರಾಜಕೀಯ ಪಕ್ಷಗಳು ತಮ್ಮ ಸಿದ್ಧಾಂತಗಳನ್ನು ಬಲವಾಗಿ ಹೇರುವ ಪ್ರಯತ್ನ ಮಾಡದೆ ಸಮಾಜಕ್ಕೆ ಏನು ಬೇಕು ಅದನ್ನು ಕೊಡುವ ಪ್ರಯತ್ನ ಮಾಡಬೇಕು. ಒಂದು ವೇಳೆ ರಾಜಕಾರಣಿಗಳು ಎಡವಿದರೆ ಅವರನ್ನು ಟೀಕಿಸುವ ಮತ್ತು ಸರಿ ತಪ್ಪನ್ನು ತಿಳಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು. ಮೌಲ್ಯಾಧಾರಿತ ರಾಜಕಾರಣ ಎಂಬ ಘೋಷಣೆಯೊಂದಿಗೆ ರಂಗಕ್ಕಿಳಿದಿರುವ ವೆಲ್ಫೇರ್ ಪಾರ್ಟಿಯ ಭವಷ್ಯ ಉಜ್ವಲವಾಗಲಿ ಎಂದು ಅವರು ಹಾರೈಸಿದರು.

ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಖ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಝೀಝ್ ಜಾಗಿರ್ದಾರ್, ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಯುನೂಸ್ ರುಕ್ನುದ್ದೀನ್, ಮುಖಂಡರಾದ ಅಬ್ದುಲ್ ಜಬ್ಬಾರ್ ಅಸದಿ, ಫಾರೂಖ್ ಮಾಸ್ಟರ್, ಶೌಕತ್ ಖತೀಬ್, ಖಮರುದ್ದೀನ್ ಮಷಾಯಿಖ್ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News